ಅಲೆಕ್ಕಾಡಿ : ಯುವತಿ ನಾಪತ್ತೆ – ಪೊಲೀಸ್ ದೂರು

0

ಅಲೆಕ್ಕಾಡಿ ಎಂಬಲ್ಲಿಂದ ಯುವತಿಯೋರ್ವಳು ಕಾಣೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರುಳ್ಯ ಗ್ರಾಮದ ಅಲೆಕ್ಕಾಡಿ ಸುಂದರ ಗೌಡ ಎಂಬವರ ಪುತ್ರಿ ಜಯಶ್ರೀ ( 24) ಎಂಬವರು ಫೆ.22 ರಿಂದು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಯುವತಿಯ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಮಗಳಾದ ಜಯಶ್ರೀ ಎಂಬವರಿಗೆ 24 ವರ್ಷ ಪ್ರಾಯವಾಗಿದ್ದು, ಆಕೆಗೆ ಮದುವೆಯಾಗಿರುವುದಿಲ್ಲ. ಜಯಶ್ರೀಯು ಪದವೀಧರೆಯಾಗಿದ್ದು ಸುಮಾರು ಒಂದೂವರೆ ವರ್ಷದಿಂದ ಮಂಗಳೂರಿನ ಯೆಯ್ಯಾಡಿಯಲ್ಲಿ ಬೋನ್‌ ಮಸಲಾ ಕಂಪನಿಯಲ್ಲಿ ಎಕೌಂಟೆಂಟ್‌ ಕೆಲಸ ಮಾಡುತ್ತಿದ್ದು ಪಿ.ಜಿಯಲ್ಲಿ ಉಳಿದುಕೊಳ್ಳುತ್ತಿದ್ದಳು. ಜಯಶ್ರೀಗೆ ಮದುವೆ ಮಾಡುವ ತಯಾರಿಯಲ್ಲಿರುವ ವೇಳೆ ಆಕೆಯು ಹುಣಸೂರು ಮೂಲದ ಸುನಿಲ್‌ ಎಂಬಾತನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿದ್ದು, ಈ ಬಗ್ಗೆ ಸುಮಾರು 20 ದಿನಗಳ ಹಿಂದೆ ಜಯಶ್ರೀಯನ್ನು ಮನೆಗೆ ಕರೆಸಿ ಆಕೆಗೆ ಬುದ್ದಿವಾದ ಹೇಳಿದ್ದು, ಬಳಿಕ ಆಕೆಯನ್ನು ಕೆಲಸಕ್ಕೆ ಕಳುಹಿಸಿರುವುದಿಲ್ಲ. ದಿನಾಂಕ 22-02-2024 ರಂದು ಬೆಳಿಗ್ಗೆ ನಾನು ಹಾಗೂ ಮಗ ಜಗನ್‌ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಪತ್ನಿ ತಂಗಮ್ಮ ಹಾಗೂ ಮಗಳು ಜಯಶ್ರೀ ಇದ್ದು, ಮಧ್ಯಾಹ್ನ ಸುಮಾರು 12-00 ಗಂಟೆಗೆ ನನ್ನ ಪತ್ನಿ ನೆರೆಮನೆಗೆ ದೈವಕೋಲಕ್ಕೆ ಹೋಗಿ ವಾಪಾಸ್ಸು ಮಧ್ಯಾಹ್ನ 2-00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ಜಯಶ್ರೀ ಇಲ್ಲದೇ ಇದ್ದು, ಈ ವಿಚಾರವನ್ನು ತಂಗಮ್ಮರವರು ಕರೆ ಮಾಡಿ ತಿಳಿಸಿದ್ದು ಹಾಗೂ ಮಗ ಮನೆಗೆ ಬಂದು ನೆಂಟರಿಷ್ಟರಿಗೆ ಕರೆ ಮಾಡಿ ಆಸುಪಾಸು ಹುಡುಕಾಡಿದರೂ ಜಯಶ್ರೀ ಪತ್ತೆಯಾಗಿರುವುದಿಲ್ಲ. ಜಯಶ್ರೀ ಮನೆಯಿಂದ ಹೋಗುವ ವೇಳೆ ಆಕೆಯ ಮೊಬೈಲ್‌ ತೆಗೆದುಕೊಂಡು ಹೋಗಿದ್ದು ಅದರಲ್ಲಿ ಸಿಮ್‌ ಇರುವುದಿಲ್ಲ. ಉಳಿದಂತೆ ಆಕೆಯ ವೈಯಕ್ತಿಕ ದಾಖಲೆಯನ್ನು ತೆಗೆದುಕೊಂಡು ಹೋಗಿರುತ್ತಾಳೆ. ಜಯಶ್ರೀಯು ಹುಣಸೂರಿನ ಸುನಿಲ್‌ ಎಂಬಾತನ ಜೊತೆ ಹೋಗಿರುವ ಸಂಶಯ ಇರುತ್ತದೆ. ಆದುದರಿಂದ ಕಾಣೆಯಾದ ಮಗಳನ್ನು ಪತ್ತೆ ಮಾಡಿಕೊಡುವಂತೆ ವಿನಂತಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ
ಹೆಸರು:ಜಯಶ್ರೀ ಪ್ರಾಯ: 24 ವರ್ಷ, ವಿದ್ಯಾಭ್ಯಾಸ:- ಬಿ.ಕಾಂ.ಪದವಿ . ಮಾತನಾಡುವ ಭಾಷೆ: ತುಳು, ಕನ್ನಡ,ಇಂಗ್ಲಿಷ್. ಮೈ ಕಟ್ಟು:- ಸಪೂರ ಶರೀರ, ಮೈ ಬಣ್ಣ: ಬಿಳಿ ಮೈ ಬಣ್ಣ , ಎತ್ತರ: ಸುಮಾರು 5 ಅಡಿ, ಧರಿಸಿದ ಬಟ್ಟೆ:- ಚೂಡಿದಾರ (ಬಣ್ಣ ತಿಳಿದಿರುವುದಿಲ್ಲ.)