ಕೊಡೆಂಚಿಕಾರ್ ಕೊರಗ ತನಿಯ ದೈವಸ್ಥಾನದಲ್ಲಿ ಕೊರಗಜ್ಜ ದೈವದ ನೇಮೋತ್ಸವ- ಏಕಕಾಲದಲ್ಲಿ ಏಳು ದೈವಗಳ ನರ್ತನ ಸೇವೆ

0

ಪೇರಾಲು ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22 ನೇ ವರ್ಷದ ಶ್ರೀ ಕೊರಗತನಿಯ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವವು
ಫೆ. 24 ರಂದು ಜರುಗಿತು.

ಫೆ. 24 ರಂದು ಬೆಳಗ್ಗೆ ಗಣಪತಿ ಹೋಮ ಮತ್ತು ನಾಗಪೂಜೆ, ನಂತರ ಶನಿ ಪೂಜೆ, ಹೂವಿನಪೂಜೆ, ಕಲಶ ಸ್ನಾನವಾಗಿ ನಂತರ ಸ್ಥಳೀಯ ಭಜನಾ ತಂಡಗಳ ಸದಸಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆಯು ನಡೆಯಿತು.
ಸಂಜೆ ಶ್ರೀ ಗುಳಿಗ ದೈವದ ಕೋಲವಾಗಿ ಪ್ರಸಾದ ವಿತರಣೆಯಾಯಿತು. ರಾತ್ರಿ ಮಹಾಪೂಜೆಯಾಗಿ ಸ್ವಾಮಿ ಕೊರಗಜ್ಜನ ಭಂಡಾರ ತೆಗೆದು ಶ್ರೀ ಕೊರಗಜ್ಜ ದೈವದ ಕೋಲವು ನಡೆಯಿತು. ಏಕಕಾಲದಲ್ಲಿ ಏಳು ಕೊರಗಜ್ಜ ದೈವದ ಕೋಲವು ವಿಜೃಂಭಣೆಯಿಂದ ಜರುಗಿತು.
ರಾತ್ರಿ ಅನ್ನ ಪ್ರಸಾದ ವಿತರಣೆಯಾಗಿ ಭಕ್ತರು ಶ್ರೀ ಕೊರಗ ತನಿಯ ದೈವಕ್ಕೆ ಹೂಮಾಲೆ ಅರ್ಪಿಸಿದರು. ಮರುದಿನ ಪ್ರಾತ:ಕಾಲ ಪ್ರಸಾದ ವಿತರಣೆಯಾಗಿ ಹರಕೆಯ ತುಲಾಭಾರ ಸೇವೆಯು ನಡೆಯಿತು.
ಊರಿನ ಪರ ಊರಿನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ದೈವದ ನರ್ತನ ಸೇವೆಯನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳ್ತೆದಾರ ಕೃಷ್ಣಪ್ಪ ಕೆ ಕೊಡೆಂಚಿಕಾರ್ ಹಾಗೂ ಸಮಿತಿ ಸದಸ್ಯರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.

ಸನ್ಮಾನ:
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.