ಬೊಳ್ಕಜೆ: ಧರ್ಮ ನಡಾವಳಿ

0

ಬೊಳ್ಕಜೆ ತರವಾಡು ಮನೆಯ ಧರ್ಮದೈವ ಪರಿವಾರ ದೈವಗಳ ದೈವಸ್ಥಾನದಲ್ಲಿ ಪೆ.24 ಮತ್ತು 25 ರಂದು ಧರ್ಮ ನಡಾವಳಿ ನಡೆಯಿತು.

24 ರಂದು ಬೆಳಗ್ಗೆ ಗಣಪತಿ ಹವನ, ನಾಗ ತಂಬಿಲ, ದೈವಗಳಿಗೆ ತಂಬಿಲ, ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಬೋಜನ ಪ್ರಸಾದ, ಸಂಜೆ ಶ್ರೀ ರಾಜನ್ ದೈವ ಮತ್ತು ಧರ್ಮ ದೈವಗಳ ಭಂಡಾರ ತೆಗೆದು ಅನ್ನ ಸಂತರ್ಪಣೆ ಬಳಿಕ ಕಲ್ಲುರ್ಟಿ, ವ್ಯಾಘ್ರ ಚಾಮುಂಡಿ ಮತ್ತು ಕೊರತ್ತಿ ದೈವಗಳ ನೇಮ ನಡೆದು, 25 ರಂದು ಬೆಳಗ್ಗೆ ಧರ್ಮ ದೈವ, ಶ್ರೀ ರಜನ್ ದೈವ ಸ ಪರಿವಾರ ದೈವಗಳ ನೇಮೂ ತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.