ದೇವಚಳ್ಳ ಶಾಲೆಯಲ್ಲಿ ವಿಜ್ಞಾನ ಮತ್ತು ಮೆಟ್ರಿಕ್ ಮೇಳ

0

ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.೨೪ರಂದು ವಿಜ್ಞಾನ ಮತ್ತು ಮೆಟ್ರಿಕ್ ಮೇಳ ಹಾಗೂ ಸ್ಪೋಕನ್ ಇಂಗ್ಲಿಷ್ ತರಗತಿ ಪ್ರಾರಂಭ ಕಾರ್ಯಕ್ರಮ ನಡೆಯಿತು.
ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಸದಸ್ಯೆ ಪ್ರೇಮಲತ ಕೇರ ನೆರವೇರಿಸಿದರು. ವಿಜ್ಞಾನ ಮೇಳವನ್ನು ಎಲಿಮಲೆ ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಂತ ಹರ್‍ಲಡ್ಕ ಉದ್ಘಾಟಿಸಿದರು. ಶಾಲಾ ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ಮೋಡೆಲ್ ಹಾಗೂ ಪ್ರಯೋಗಗಳನ್ನು ಮಾಡಿ ತೋರಿಸಿದರು. ಮೆಟ್ರಿಕ್ ಮೇಳದಲ್ಲಿ ಮಕ್ಕಳು ಮನೆಯಲ್ಲಿ ಬೆಳೆದ ತರಕಾರಿ, ಹಣ್ಣುಗಳು ತಿಂಡಿ ಮತ್ತು ಪಾನೀಯಗಳನ್ನು ಮಾಡಿ ವ್ಯಾಪಾರ ಮಾಡಿದರು. ಪೋಷಕರು ತಮ್ಮ ಮಕ್ಕಳ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಪ್ರೋತ್ಸಾಹ ನೀಡಿದರು.


ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಾನಂದ ಪಟ್ಟೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಸವಿತಾ ಸಿ, ಒಡಿಯೂರು ಸಂಘದ ಪ್ರೇರಕಿ ಪವಿತ್ರ ಮೊದಲಾದವರಿದ್ದರು. ಮುಖ್ಯ ಶಿಕ್ಷಕರಾದ ಶ್ರೀಧರ ಗೌಡ ಕಕೆ ಪ್ರಾಸ್ತಾವಿಕ ಮಾತನಾಡಿದರು. ಎಲ್‌ಕೆಜಿ ಮಕ್ಕಳಿಂದ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.