ಸಂಪಾಜೆ: ಕುಯಿಂತೋಡು ಐನ್ ಮನೆಯಲ್ಲಿ ಧರ್ಮದೈವ ಹಾಗೂ ಉಪದೈವಗಳ ನಡಾವಳಿ

0

ಸಂಪಾಜೆ ಗ್ರಾಮದ ಕುಯಿಂತೋಡು ಐನ್ ಮನೆಯಲ್ಲಿ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಶ್ರೀ ಧರ್ಮದೈವ, ರುದ್ರಚಾಮುಂಡಿ, ಶ್ರೀ, ವ್ಯಾಘ್ರಚಾಮುಂಡಿ , ಶ್ರೀ ರಕ್ತೇಶ್ವರಿ ಹಾಗೂ ಉಪ ದೈವಗಳ ಧರ್ಮ ನಡಾವಳಿಯು ಫೆ‌.23ರಿಂದ ಫೆ.25ರವರೆಗೆ ವಿಜೃಂಭಣೆಯಿಂದ ಜರುಗಿತು.

ಫೆ.23ರಂದು ಬೆಳಿಗ್ಗೆ ಗಣಹೋಮ ನಡೆದು ಉಗ್ರಾಣ ತುಂಬಿಸಲಾಯಿತು. ಬಳಿಕ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಕೆಂಚರಾಯನ ಪೂಜೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಫೆ.24ರಂದು ಸಂಜೆ ದೈವಗಳ ಭಂಡಾರ ತೆಗೆದು, ರಾತ್ರಿ ಕಾರ್ನೂರ್ ದೈವ, ಸತ್ಯದೇವತೆ ದೈವದ ಕೋಲ, ಅನ್ನಸಂತರ್ಪಣೆ ಜರುಗಿತು.

ಫೆ.25ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ ದೈವ, ಶ್ರೀ ಗುಳಿಗಬಂಟ, ಶ್ರೀ ವ್ಯಾಘ್ರಚಾಮುಂಡಿ ದೈವ, ಶ್ರೀ ಧರ್ಮದೈವ ರುದ್ರಚಾಮುಂಡಿ ಹಾಗೂ ನಾಗ ಚಾಮುಂಡಿ ದೈವಗಳ ಕೋಲ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.
ಅಪರಾಹ್ನ ಅಂಗಾರಬಾಕುಡ ದೈವ, ಶ್ರೀ ಧರ್ಮದೈವ ಗುಳಿಗ ದೈವಗಳ ಕೋಲೋತ್ಸವ, ರಾತ್ರಿ ಕೂಜಿ ದೈವಕೋಲ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಈ ಸಂದರ್ಭದಲ್ಲಿ ಕುಯಿಂತೋಡು ಕುಟುಂಬದ ಮೊಕ್ತೇಸರ ಕೆ.ಸಿ. ನಾರಾಯಣ ಗೌಡ, ಕುಟುಂಬದ ಯಜಮಾನ ದೇವಯ್ಯ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ. ಜಯರಾಮ ಗೌಡ ಸೇರಿದಂತೆ ಕುಯಿಂತೋಡು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.