ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ಅವರಿಗೆ ದುಬೈಯಲ್ಲಿ ಸನ್ಮಾನ

0

ವಿವಿಧ ಕಾರ್ಯಕ್ರಮದ ನಿಮಿತ್ತ ದುಬೈಗೆ ಬೇಟಿ ನೀಡಿರುವ ಕೆ.ಪಿ.ಸಿ.ಸಿ. ಮುಖ್ಯ ವಕ್ತಾರ ಹಾಗೂ ಅರಂತೋಡಿನ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಅವರಿಗೆ ಅರಂತೋಡು ದುಬೈ ಕಮಿಟಿ ವತಿಯಿಂದ ಕಿರು ಕಾಣಿಕೆ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಖಜಾಂಜಿ ನಾಸಿರುದ್ದೀನ್ ಪಟೇಲ್, ಸರ್ಫರಾಜ್, ನವಾಜ್ , ಸಲಹಾ ಸಮಿತಿ ಸದಸ್ಯ ಸೈಫುದ್ದೀನ್ ಪಟೇಲ್ , ರಿಫಾಯಿ ಪಟೇಲ್, ಬಾತಿಷಾ ಬಿಳಿಯಾರ್, ಟಿ ಎಂ ಶಾಝ್ ತೆಕ್ಕಿಲ್ ಉಪಸ್ಥಿತರಿದ್ದರು.