ಹರಿಹರ ಪಲ್ಲತಡ್ಕ:ಅಯ್ಯಪ್ಪ ಸ್ವಾಮಿ ಭಜನಾ ಮಂದಿರಕ್ಕೆ ಶಿಲಾನ್ಯಾಸ

0

ಶ್ರೀ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಫೆ.24 ರಂದು ನಡೆಯಿತು. ಪುರೋಹಿತ ನಾಗರಾಜ ಭಟ್ ಇವರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭ ಬಳ್ಪ ತ್ರಿಶೂಲಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೂಡು, ವಾಸ್ತುತಜ್ಞ ಪ್ರಸಾದ್ ಮುನಿಯಂಗಲ, ಹರಿಹರ ಪಲ್ಲತಡ್ಕ ಗ್ರಾ. ಪಂದೇವಸ್ಥಾನದಿಂದ ಅಧ್ಯಕ್ಷ ವಿಜಯ ಅಂಙಣ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ವೈದ್ಯರಾದ ಡಾ. ಚಂದ್ರಶೇಖರ ಕಿರಿಬಾಗ, ಕೊಲ್ಲಮಗ್ರ- ಹರಿಹರ ಪಲ್ಲತಡ್ಕ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ ಹಿಮ್ಮತ್ ಕೆ.ಸಿ ಮತ್ತಿತರರು ಉಪಸ್ಥಿತರಿದ್ದರು.