ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ರಂಜಿಸಿದ ಜುಗಲ್ ಬಂಧಿ, ಭಕ್ತಿ ಗಾನ ಸುಧೆ

0

ಸುಳ್ಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.27 ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರಿಂದ ವಾದ್ಯ ಸಂಗೀತ ಜುಗಲ್ ಬಂಧಿ ಹಾಗೂ ಭಕ್ತಿ ಗೀತೆಗಳ ಗಾನ ಸುಧೆಯು ಪ್ರದರ್ಶನಗೊಂಡಿತು.


ಶಿವ ಸ್ವರ ಮೇಲೋಡಿಸ್ ತಂಡದ ಕೇರಳ ಮತ್ತು ಕರ್ನಾಟಕದ ಕಲಾವಿದರು ಭಾಗವಹಿಸಿದರು.


ಸ್ಯಾಕ್ಸ್ ಫೋನ್ ವಾದಕ
ಡಾ.ಉದಯ್ ಕುಮಾರ್, ಕೀ ಬೋರ್ಡ್, ಕಿಟಾರ್ ನಲ್ಲಿ ಸತ್ಯನಾರಾಯಣ ಐಲಾ, ಕೊಳಲು ವಾದಕ ಸಮರ್ಥ್ ಮಂಗಳೂರು ವಾದ್ಯ ಸಂಗೀತದ ಮೂಲಕ ಜುಗಲ್ ಬಂಧಿ ನಡೆಸಿಕೊಟ್ಟರು. ಗಾಯಕರಾಗಿ ಮಿಥುನ್ ರಾಜ್ ವಿದ್ಯಾಪುರ, ಅನೂಪ್ ಕಾಂಞಂಗಾಡ್, ಉಜ್ವಲ ಆಚಾರ್ ಸಹಕರಿಸಿದರು.
ಗಾಯಕ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.