ಮೊಗ್ರ: ಹುಂಡಿ ಕಳವು, ಪೊಲೀಸ್ ದೂರು

0

ಗುತ್ತಿಗಾರು ಗ್ರಾಮದ ಮೊಗ್ರದಿಂದ ಎಡೋಣಿಗೆ ಹೋಗುವ ಕಿಣ್ಣಿಕುಮೇರಿ ಕ್ರಾಸ್ ರಸ್ತೆಯಲ್ಲಿ ಸಿಗುವ ಮೊಗ್ರ ಉಳ್ಳಾಕುಲು, ಅಜ್ಜಿ ದೈವದ ಕಾಣಿಕೆ ಹುಂಡಿಯ ಬೀಗವನ್ನು ಎಕ್ಸಲ್ ಬ್ಲೇಡ್ ನಿಂದ ಕುಯ್ಯಿದು ಹಣ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

ಈ ಬಗ್ಗೆ ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಆಡಳಿತ ಮಂಡಳಿ ಮೊಕ್ತೆರಸರ ಕಾರ್ಯಪ್ಪ ಗೌಡ ಚಿಕ್ಮುಳಿ ಫೆ.24 ರಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಬಂದು ಪರಿಶೀಲಿಸಿರುವುದಾಗಿ ವರದಿಯಾಗಿದೆ.