ಲ್ಯಾಂಪ್ ಸೊಸೈಟಿಯ ಬಡ್ಡಡ್ಕ ಶಾಖೆಯ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನೆ

0

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆಲೆಟ್ಟಿ ಗ್ರಾಮದ ಬಡ್ಡಡ್ಕ ಶಾಖೆಯ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಫೆ. 28ರಂದು ನಡೆಯಿತು.


ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಗೋದಾಮು ಉದ್ಘಾಟನೆ ಮಾಡಿದರು. ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಮಾಜಿ ಜಿ.ಪಂ. ಸದಸ್ಯ ದೇವಪ್ಪ ನಾಯ್ಕ ಜಿ ದೀಪ ಪ್ರಜ್ವಲನೆ ಮಾಡಿದರು. ಆಲೆಟ್ಟಿ ಗ್ರಾ.ಪಂ. ಸದಸ್ಯ ಸತ್ಯ ಕುಮಾರ್ ಆಡಿಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ವ್ಯವಸ್ಥಾಪಕ ಹರೀಶ್ ಮೆದು ಮತ್ತು ಲ್ಯಾಂಪ್ ಸೊಸೈಟಿಯ ನಿರ್ದೇಶಕಿ ಶ್ರೀಮತಿ ವಿಶಾಲಾಕ್ಷಿ ಟಿ. ಆಲೆಟ್ಟಿ ಗೌರವ ಉಪಸ್ಥಿತರಾಗಿದ್ದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಕಾರ್ಯನಿರ್ವಹಣಾಧಿಕಾರಿ ಹಾಲಿ ನಿರ್ದೇಶಕಿ ಶ್ರೀಮತಿ ಸಾವಿತ್ರಿ ರೈ, ಲ್ಯಾಂಪ್ಸ್ ಕರ್ನಾಟಕ ಸಹಕಾರ ಮಹಾಮಂಡಲದ ಸಹಾಯಕ ಯೋಜನಾಧಿಕಾರಿ ಆನಂದ ತಳವಾರ, ಸಂಘದ ಉಪಾಧ್ಯಕ್ಷ ಬಿ. ಕುಂಞಣ್ಣ ನಾಯ್ಕ ಬಾಳೆಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ನಿರ್ದೇಶಕ ಮಾಧವ ದೇವರಗದ್ದೆ ವಂದಿಸಿದರು. ಸಂಘದ ನಿರ್ದೇಶಕಿ ಶ್ರೀಮತಿ ರೇವತಿ ಮತ್ತು ಸಿಬ್ಬಂದಿ ಕು. ಲತಾ ಪ್ರಾರ್ಥಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

ಗ್ರಾಮೀಣ ಭಾಗದ ಜನತೆಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಬಡ್ಡಡ್ಕ ಶಾಖೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಸಂಘ ಕಲ್ಪಿಸಿದೆ. ಈ ಭಾಗದ ಜನರು ಇಲ್ಲಿಯೇ ವ್ಯವಹರಿಸಿ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಸಹಕಾರ ನೀಡಿ. ಸಂಘದ ಪ್ರಧಾನ ಕಚೇರಿಯ ಮೇಲ್ಛಾವಣಿಗೆ ಶೀಟ್ ಹಾಕಿಸಲು ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅದನ್ನು ಒದಗಿಸುವ ಪ್ರಯತ್ನ ಮಾಡುತ್ತೇನೆ – ಭಾಗೀರಥಿ ಮುರುಳ್ಯ

ಸಣ್ಣ ಮಟ್ಟದಲ್ಲಿ ಆರಂಭವಾದ ಲ್ಯಾಂಪ್ ಸೊಸೈಟಿ ಇಂದು ದೊಡ್ಡದಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಕಡಬ ತಾಲೂಕಿನಲ್ಲಿಯೂ ಶಾಖೆಯನ್ನು ತೆರೆಯಬೇಕೆಂಬ ಯೋಜನೆ ಇಟ್ಟುಕೊಂಡಿದ್ದೇವೆ. ವರದಿ ಸಾಲಿನಲ್ಲಿ ಸಂಘ 3.5 ಕೋಟಿ ಸಾಲ ನೀಡಿದ್ದು, ರೂ. 4 ಕೋಟಿಗೂ ಮಿಕ್ಕಿ ಡೆಪಾಸಿಟ್ ಹೊಂದಿದೆ. ಸಂಘದ ಅಭಿವೃದ್ಧಿಗೆ ಮುಂದೆಯೂ ಎಲ್ಲರ ಸಹಕಾರ ಅಗತ್ಯ – ಸೀತಾನಂದ ಬೇರ್ಪಡ್ಕ