ಮಾ.08 : ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪೂಜೆಯು ಮಾ.08 ರಂದು ನಡೆಯಲಿದೆ.
ಮಾ.08 ರಂದು ಸಂಜೆ ಗಂಟೆ 6.00 ರಿಂದ ಶತರುದ್ರಾಭಿಷೇಕ,ರಾತ್ರಿ ಗಂಟೆ 9.30 ಕ್ಕೆ ಮಹಾಪೂಜೆ ನಡೆಯಲಿದೆ.
ಸಂಜೆ ಗಂಟೆ 7.00 ರಿಂದ 9.00 ರ ತನಕ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ನಿರ್ದೇಶನದ ಪದಮಾನ ತಂಡದವರಿಂದ ಭರತನಾಟ್ಯ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ರವರು ತಿಳಿಸಿದ್ದಾರೆ.