ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸನ್ಮಾನ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ ಇದರ ಆಶ್ರಯದಲ್ಲಿ ಫೆ 29 ರಂದು ಪಂಜ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನಿಯ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ ವಹಿಸಿದ್ದರು.
ಪಂಜ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಇವರು ಸ್ವಯಂ ಪ್ರೇರಿತ ರಕ್ತದಾನಿ ಸುಜಿತ್ ಪಂಬೆತ್ತಾಡಿ ಇವರನ್ನು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಯುವ ತೇಜಸ್ಸು ಟ್ರಸ್ಟ್ ನ ಕಾರ್ಯ ನಿರ್ವಾಹಕ ಸಂಯೋಜಕ ಗುರು ಪ್ರಸಾದ್ ಪಂಜ ಭಾಗವಹಿಸಿದ್ದರು, ವೇದಿಕೆಯಲ್ಲಿ ಘಟಕದ ಜೊತೆ ಕಾರ್ಯದರ್ಶಿ ಜೇಸಿ ಕಿರಣ್ ನೆಕ್ಕಿಲ, ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಅಶ್ವಥ್ ಬಾಬ್ಲುಬೆಟ್ಟು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವ ತೇಜಸ್ ಟ್ರಸ್ಟ್ ಇವರು ಕಳೆದ ಮೂರು ತಿಂಗಳಿನಿಂದ ರಕ್ತಕ್ಕೆ ಸಂಬಂಧಪಟ್ಟ (High Risk Acute Myeloid Leukaemia) ಖಾಯಿಲೆಯಿಂದ ಬಳಲುತ್ತಿರುವ ಬಳ್ಪ ಗ್ರಾಮ ಬೆಂಗನಡ್ಕ ನಿವಾಸಿ ಶ್ರೀಮತಿ ಅನುಷಾ ಮತ್ತು ಸಂತೋಷ್ ಕುಮಾರ್ ರೈ ದಂಪತಿಯ ಪುತ್ರಿ ಬೇಬಿ|| ಸಂತೃಪ್ತಿಯ ಮುಂದಿನ ಚಿಕಿತ್ಸೆಗಾಗಿ ಸಂಗ್ರಹಿಸಿದ ಧನಸಹಾಯದ ಚೆಕ್ ಅನ್ನು ಯುವತೇಜಸ್ಸು ಟ್ರಸ್ಟ್ ನ ಹಿತೈಷಿ ಹಾಗೂ ದಾನಿಗಳೂ ಆದ ಸುಂದರ ಚಿದ್ಗಲ್ ಇವರ ಮಾತೃಶ್ರೀಯವರಾದ ಶ್ರೀಮತಿ ಗಿರಿಜಾ ಪೆರ್ಗಡೆ ಗೌಡ ಚಿದ್ಗಲ್ ಇವರ ಮೂಲಕ ಹಸ್ತಾಂತರಿಸಲಾಯಿತು .

ಸುಬ್ರಹ್ಮಣ್ಯ ಕುದ್ಪಾಜೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಜೇಸಿ ಗಗನ್ ಕಿನ್ನಿಕುಮ್ರಿ ಜೇಸಿವಾಣಿ ನುಡಿದರು, ಕಾರ್ತಿಕ್ ಐ ವಿ ಸನ್ಮಾನಿತರನ್ನು ಪರಿಚಯಿಸಿದರು, ಘಟಕದ ಜೊತೆ ಕಾರ್ಯದರ್ಶಿ ಕಿರಣ್ ನೆಕ್ಕಿಲ ವಂದಿಸಿದರು.