ನಾಳೆ ಜಟ್ಟಿಪಳ್ಳದಲ್ಲಿ ಮಹಿಳೆಯರ ತಾಲೂಕು ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ

0

ಸುಳ್ಯ ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿಹಬ್ಬ ಆಚರಣೆ ಪ್ರಯುಕ್ತ ನಾಳೆ ಮಾ.3 ರಂದು ಜಟ್ಟಿಪಳ್ಳದಲ್ಲಿ ತಾಲೂಕು ಮಟ್ಟದ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.
ವಿಜೇತರಿಗೆ ಪ್ರಥಮ ರೂ.5001, ದ್ವಿತೀಯ ರೂ.3001, ತೃತೀಯ ರೂ.2001 ಹಾಗೂ ಚತುರ್ಥ ಬಹುಮಾನ ರೂ.1001ನಿಗದಿಪಡಿಸಲಾಗಿದೆ.
ಸ್ಪರ್ಧೆಯಲ್ಲಿ ತಾಲೂಕಿನ ಮಹಿಳಾ ಮಂಡಲಗಳು, ಸ್ತ್ರೀಶಕ್ತಿ ಸಂಘಗಳು, ಯುವತಿ ಮಂಡಲಗಳು, ಸ್ವಸಹಾಯ ಸಂಘಗಳು 8 ಜನರ ತಂಡದೊಂದಿಗೆ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ.