ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ

0

ಮನವಿಗೆ ತುರ್ತಾಗಿ ಸ್ಪಂದಿಸುವ ಭರವಸೆ ನೀಡಿದ ಆಯುಕ್ತರು

ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24×7 ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಬೇಕೆಂದು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಧಾರ್ಮಿಕ ಆಯುಕ್ತ ಬಸವರಾಜೇಂದ್ರ ಎಚ್ ಅವರಿಗ ಮಾ.1 ರಂದು ಮನವಿ ಮಾಡಲಾಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ಮನವಿ ನೀಡಲಾಗಿದ್ದು
ಮನವಿ ಸ್ವೀಕರಿಸಿದ ಅವರು ಶೀಘ್ರವಾಗಿ ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ವರದಿಯಾಗಿದೆ. ಟ್ರಸ್ಟ್ ನ ಅಧ್ಯಕ್ಷ ರವಿಕಕ್ಕೆಪದವು , ಪದಾಧಿಕಾರಿಗಳು, ಕೆಲ ಸದಸ್ಯರು ಉಪಸ್ಥಿತರಿದ್ದು ಮನವಿ ನೀಡಲಾಯಿತು.