ಹರಿಹರ ಪಲ್ಲತ್ತಡ್ಕ : ಶಿವ ಹರಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

0

ಶಿವಹರಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ (ರಿ)ಹರಿಹರ ಪಲ್ಲತ್ತಡ್ಕ ಇದರ ವಾರ್ಷಿಕ ಮಹಾಸಭೆ ಹಾಗು ಪದಗ್ರಹಣ ಮಾ. ೧ರಂದು ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ಸಂಘದ ಅದ್ಯಕ್ಷ ದಯಾನಂದ ಪರಮಲೆರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಅದ್ಯಕ್ಷರಾದ ರಾಧಕೃಷ್ಣ ಬೈತಡ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ನಿತ್ಯಾನಂದ ಅರಂಬೂರು ಹಾಜರಿದ್ದರು

ಶಿವಹರಿ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಪ್ರದಾನ ಕಾರ್ಯದರ್ಶಿ ಲೋಕೇಶ್ ರಾಗಿಯಡ್ಕ ವಾರ್ಷಿಕ ಲೆಕ್ಕಪತ್ರ ವಾಚಿಸಿದರು.
ಸಂಘದ ನೂತನ ಅಧ್ಯಕ್ಷರಾಗಿ ದಯಾನಂದ ಪರಮಲೆ,ಕಾರ್ಯದರ್ಶಿಯಾಗಿ ಲೋಕೇಶ್ ರಾಗಿಯಡ್ಕ, ಹಾಗು ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.
ಮಧು ಗೊಳ್ಯಾಡಿ ಸ್ವಾಗತಿಸಿ, ವಂದಿಸಿದರು.