ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ. ಕೃ. ಪ. ಸಹಕಾರಿ ಸಂಘದ ಶತಮಾನೋತ್ಸವ ಆಚರಣೆ

0

ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶತಮಾನೋತ್ಸವ ಆಚರಣೆ ಮಾಡುತಿದ್ದು ಆ ಪ್ರಯುಕ್ತ ಕ್ರೀಡಾಕೂಟ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಪ್ರಧಾನ ಕಚೇರಿ ಹರಿಹರ ಪಲ್ಲತಡ್ಕದಲ್ಲಿ ಮಾ.1 ರಂದು ನಡೆಯಿತು.

ಸಂಘದ ಸದಸ್ಯರುಗಳಿಗೆ, ಆಡಳಿತ ಮಂಡಳಿಗೆ, ನವೋದಯ ಸಹಾಯ ಸಂಘದ ಸದಸ್ಯರುಗಳಿಗೆ, ಹಾಗೂ ಸಿಬ್ಬಂದಿ ವರ್ಗಕ್ಕೆ ಏರ್ಪಡಿಸಲಾಗಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಸಂಘದ ಅಧ್ಯಕ್ಷ ಹರ್ಷ ಕುಮಾರ್ ದೇವಜನ, ಉಪಾಧ್ಯಕ್ಷ ಶೇಖರ್ ಅಂಬೆಕಲ್ಲು, ಕಾರ್ಯ ನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ, ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರ ರಾಮಚಂದ್ರ ಪಳಂಗಾಯ, ಸಂಘದ ನಿರ್ದೇಶಕರು ಶತಮಾನೋತ್ಸವ ಸಮಿತಿಯ ವಿವಿಧ ಸಮಿತಿಯ ಪದಾಧಿಕಾರಿಗಳ ಉಪಸ್ಥಿತರಿದ್ದರು.