ಡಿಸಿಸಿ ಬ್ಯಾಂಕ್ ಚುನಾವಣೆ : ಎಸ್.ಎನ್. ಮನ್ಮಥ ನಾಮಪತ್ರ ಸಲ್ಲಿಕೆ

0

ಮಾ. 11 ರಂದು ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸುಳ್ಯ ಬಿಜೆಪಿ ಹಾಗೂ ಸಹಕಾರ ಭಾರತಿ ಅಭ್ಯರ್ಥಿಯಾಗಿ
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್‌.ಎನ್‌.ಮನ್ಮಥರವರು ಇಂದು ಮಂಗಳೂರಿನ ಡಿಸಿಸಿ ಬ್ಯಾಂಕಿನಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ
ಎಸ್.ಸಿ.ಡಿ. ಸಿ.ಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಕುಮಾರ್, ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಹಕಾರ ಭಾರತಿ ಜಿಲ್ಲಾ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ , ಪ್ರಮುಖರಾದ ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ, ಸಂತೋಷ ಜಾಕೆ, ಸತೀಶ್ ಕೆಮನಬಳ್ಳಿ , ಶ್ರೀನಾಥ್ ರೈ ಬಾಳಿಲ, ಬಾಲಕೃಷ್ಣ ಕೀಲಾಡಿ, ದಿನೇಶ್ ಅಡ್ಕಾರು, ಪದ್ಮನಾಭ ಬೀಡು,ಕುಶಾಲಪ್ಪ ಪೆರುವಾಜೆ, ನಾರಾಯಣ ಬೊಮ್ಮೆಟ್ಟಿ , ರಾಮಕೃಷ್ಣ ರೈ ಪೇರಾಲು, ರಾಜೇಶ್ ವೈಭವ್ ಇದ್ದರು.