ಮಾರ್ಚ್ 9 ಮತ್ತು 10 : ತೊಡಿಕಾನ – ದೊಡ್ಡ ಕುಮೇರಿಯಲ್ಲಿ ಮೊಗೇರ್ಕಳ ನೇಮೋತ್ಸವ

0

ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಾರ್ಚ್ 9 ಮತ್ತು 10ರಂದು ಕ್ಷೇತ್ರ ಪಾಲಕ ಗುಳಿಗ ಮೊಗೇರ ದೈವಗಳು, ತನ್ನಿಮಾನಿಕ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ

ಮಾರ್ಚ್ 9 ರಂದು ಬೆಳಿಗ್ಗೆ ಗಣ ಹೋಮ ಬಳಿಕ ಸತ್ಯನಾರಾಯಣ ದೇವರ ಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ ಕ್ಷೇತ್ರ ಪಾಲಕ ಗುಳಿಗ ದೈವದ ನೇಮ, ಬಳಿಕ ಕುಣಿತ ಭಜನೆ ನಡೆಯಲಿದೆ.
ರಾತ್ರಿ ಅನ್ನಸಂತರ್ಪಣೆ ಬಳಿಕ ಮೊಗೇರ್ಕಳ ನೇಮ ನಡೆಯಲಿದೆ. ಮೊಗೇರ ಪಾತ್ರಿಗಳ ದರ್ಶನ ಬಳಿಕ ತನ್ನಿಮಾಣಿಕ ಗರಡಿ ಇಳಿಯುವುದು ನಡೆಯಲಿದೆ.

ಮಾರ್ಚ್ 10 ರಂದು ಬೆಳಿಗ್ಗೆ ಕಾರಣಿಕದ ದೈವ ಸ್ವಾಮಿ ಕೊರಗಜ್ಜ ನೇಮ ನಡೆಯಲಿದ್ದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ