ಅರಂತೋಡು :ಸ್ಕೂಟರಿಗೆ ದೋಸ್ತ್ ವಾಹನ ಹಿಂದಿನಿಂದ ಡಿಕ್ಕಿ, ಸ್ಕೂಟಿ ಸವಾರ ಗಂಭೀರ

0

ಮಾಣಿ ಮೈಸೂರು ಹೆದ್ದಾರಿ ಅರಂತೋಡು ಸಮೀಪ ನಾಯರ ಪೆಟ್ರೋಲ್ ಬಂಕ್ ಬಳಿ ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಸ್ಕೂಟಿ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ದೋಸ್ತ್ ವಾಹನ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ರಸ್ತೆಗೆ ಬಿದ್ದಿದ್ದು ಸವಾರನ ತಲೆಗೆ ಗಂಭೀರ ಗಾಯವಾಗಿ ಆತನನ್ನು ಸುಳ್ಯ ಆಸ್ಪತ್ರೆಗೆ ತರಲಾಗಿದೆ.
ಪರಾರಿಯಾದ ವಾಹನವನ್ನು ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಕಲ್ಲುಗುಂಡಿ ಪೊಲೀಸ್ ಔಟ್ ಪೋಸ್ಟನಲ್ಲಿ ತಡೆದು ನಿಲ್ಲಿಸಲಾಗಿದೆ ಎನ್ನಲಾಗಿದೆ.