ಮುಪ್ಪೇರ್ಯ ದೈವಗಳ ನೇಮೋತ್ಸವ

0

ಮುಪ್ಪೇರ್ಯ ಗ್ರಾಮದ ಕಾಪಡ್ಕ ಕರಿಯಪ್ಪ ಮತ್ತು ಕುಟುಂಬಸ್ಥರ ಮನೆಯಲ್ಲಿ ದೈವಗಳ ನೇಮೋತ್ಸವವು ಮಾ 2 ಮತ್ತು 3 ರಂದು ನಡೆಯಿತು.

ದಿನಾಂಕ 2 ರಂದು ದೈವಗಳ ಭಂಡಾರ ತೆಗೆದು ರಾತ್ರಿ ಗುಳಿಗ ದೈವ ಮತ್ತು ಪಾಷಾಣ ಮೂರ್ತಿ ಅಮ್ಮನವರ ಕೋಲ, ಪಿಲಿ ಭೂತ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ ಹಾಗೂ 3 ರಂದು ಬೆಳಗ್ಗೆ ಕೊರಗ ತನಿಯ ದೈವಗಳ ಕೋಲ ಮತ್ತು ಹರಕೆ ರೂಪದ ಕೊರಗ ತನಿಯ ದೈವಗಳ ಸೇವೆ ನಡೆಯಿತು.

ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ದೈವದ ನರ್ತನ ಸೇವೆಯನ್ನು ನೋಡಿ ಕಣ್ತುಂಬಿಕೊಂಡರು. ಬಂದಂತಹ ಎಲ್ಲಾ ಭಕ್ತರನ್ನು ಕುಟುಂಬದ ಪ್ರಮುಖರಾದ ಕರಿಯಪ್ಪ ಹಾಗೂ ಬಾಬು ಕಾಪಾಡ್ಕ ಮತ್ತು ಕುಟುಂಬಸ್ಥರು ಸ್ವಾಗತಿಸಿದರು ಎರಡು ದಿನವೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.