ನುಸ್ರತ್ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಹರ್ಲಡ್ಕ ಪುನರಾಯ್ಕೆ

0

ದೇವಚಳ್ಳ ಎಲಿಮಲೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್. ರಿ. ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ಪುನರಾಯ್ಕೆಯಾಗಿದ್ದಾರೆ.

ಸಂಸ್ಥೆಯ ಕಛೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ , ಉಪಾಧ್ಯಕ್ಷರಾಗಿ ಹೈದರ್ ಹಾಜಿ, ಅಬ್ದುಲ್ ಕಾದರ್ ಅತ್ತಿಮಾರಡ್ಕ,
ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ, ಕಾರ್ಯದರ್ಶಿಗಳಾಗಿ ನಾಸಿರ್ ದೊಡ್ಡಂಗಡಿ, ಅಶ್ರಫ್G.A.K.
ಕೋಶಾಧಿಕಾರಿಯಾಗಿ ಬಾತಿಶಾ ಯೂಸುಫ್, ಮ್ಯಾರೇಜ್ ಪಂಡ್ ಕನ್ವೀನರಾಗಿ ಮಹಮೂದ್ ಸಖಾಫಿ,
ಗಲ್ಫ್ ಪ್ರತಿನಿಧಿಯಾಗಿ ಹಾರಿಸ್ ಪಳ್ಳಿಕಲ್,ಹಾಗೂ
ಸದಸ್ಯರಾಗಿ ಸುಲೈಮಾನ್ ಮೆತ್ತಡ್ಕ,
ಸತ್ತಾರ್ ಮೇಲೆಬೈಲು,
ಆಸಿಫ್ ಹೊಟ್ಟಿಚೋಡಿ,
ಶಿಹಾಬ್ ಪಾಣಾಜೆ,
ಬಶೀರ್ ಮೆತ್ತಡ್ಕ,
ಶರೀಫ್ ದೊಡ್ಡಂಗಡಿ
ಆಯ್ಕೆಯಾದರು.

ಕೊಂಡಂಗೇರಿ ಮುದರಿಸರಾದ ಜುನೈದ್ ಸಖಾಫಿ ದುವಾ ನೆರವೇರಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜಮಾಅತ್ ಅಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ, ಜೀರ್ಮುಕಿ ಮಸೀದಿ ಅಧ್ಯಕ್ಷ ಅಬ್ದುಲ್ಲ G.S
ಮಹಮ್ಮದ್ ಹಾಜಿ ಹರ್ಲಡ್ಕ
ಉಪಸ್ಥಿತರಿದ್ದರು.

ಮಹಮೂದ್ ಸಖಾಫಿ,ಸೂಫಿ ಉಸ್ತಾದ್ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಹಿತನುಡಿಗಳನ್ನಾಡಿದರು.
40ನೇ ವರ್ಷದ ರೂಬಿಜ್ಯುಬಿಲಿ ವರ್ಷದಲ್ಲಿ 40 ಸಮಾಜಿಕ ಸೇವಾ ಕಾರ್ಯಕ್ರಮಗಳನ್ನೊಳಗೊಂಡ
ವಾರ್ಷಿಕ ವರದಿಯನ್ನು ಸಂಸ್ಥೆಯ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ ಮಂಡಿಸಿದರು.
ಪ್ರಧಾನಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಅಶ್ರಫ್ G.A.K ವಂದಿಸಿದರು.