ಕೊಲ್ಲಮೊಗ್ರ ಬರೋಡ ಬ್ಯಾಂಕಿನಿಂದ ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಶಾಲೆಗೆ ಚಯರ್ ಕೊಡುಗೆ

0

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರ ಶಾಲೆಗೆ ಅಂದಾಜು 10,000 ರೂ. ಮೌಲ್ಯದ 2 ಟೇಬಲ್ ಹಾಗೂ 10 ಫೈಬರ್ ಚೇರ್ ಗಳನ್ನು ಕೊಲ್ಲಮೊಗ್ರ ಬರೋಡ ಬ್ಯಾಂಕಿನ ವತಿಯಿಂದ ಬ್ಯಾಂಕಿನ ವ್ಯವಸ್ಥಾಪಕರಾದ ಗಜಾನನರವರು ನೀಡಿದರು.

ಮಾತ್ರವಲ್ಲದೆ, 2022-23 ನೇ ಶೈಕ್ಷಣಿಕ ವರ್ಷದಲ್ಲಿ 1 ಕುಕ್ಕರ್ ಅನ್ನು ಸ್ವ ಇಚ್ಛೆಯಿಂದ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಎನ್ ಜಿ ಮತ್ತು ಸರ್ವ ಸದಸ್ಯರು ಗ್ರಾಂ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಾಂತಾಳ, ಶಾಲಾ ಮುಖ್ಯೋಪಾಧ್ಯಾಯಿನಿ ಕಮಲ.ಎ ಮತ್ತು ಸಹಶಿಕ್ಷಕರು, ಶಾಲಾ ಪೋಷಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.