p>

ಸೇವಾಜೆ ಶಾಲೆಯಲ್ಲಿ ವಿಜ್ಞಾನ ಮತ್ತು ಮೆಟ್ರಿಕ್ ಮೇಳ ಹಾಗೂ ಶ್ರಮದಾನ

0

ದೇವಚಳ್ಳ ಗ್ರಾಮ ಸ ಕಿ ಪ್ರಾ ಶಾಲೆ ಸೇವಾಜೆ ಇಲ್ಲಿ ವಿಜ್ಞಾನ ಮತ್ತು ಮೆಟ್ರಿಕ್ ಮೇಳ ಹಾಗೂ ಅಂಬೇಡ್ಕರ್ ರಕ್ಷಣಾ ವೇದಿಕೆ ಅರಂತೋಡು ಇವರಿಂದ ಶ್ರಮದಾನ ಮಾ.4ರಂದು ನಡೆಯಿತು.

ಅಂಬೇಡ್ಕರ್ ರಕ್ಷಣಾ ವೇದಿಕೆ ಇವರಿಂದ ಧ್ವಜಾರೋಹಣ ನಡೆಯಿತು. ಧ್ವಜಾರೋಹಣವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾಂತಪ್ಪ ರೈ ಇವರು ನೆರವೇರಿಸಿದರು.

ಬಳಿಕ ಅಂಬೇಡ್ಕರ್ ಸಮಿತಿಯಿಂದ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛ ಮಾಡಿದರು. ಶಾಲೆಯ ಪೋಷಕರು ಕೂಡ ಸಹಕರಿಸಿದರು. ಬಳಿಕ ಶಾಲಾ ಮಕ್ಕಳ ವಿಜ್ಞಾನ ಮತ್ತು ಮೆಟ್ರಿಕ್ ಮೇಳವನ್ನು ದೇವಚಳ್ಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹಾಗೂ ಪೋಷಕರಾದ ಶ್ರೀಮತಿ ಲೀಲಾವತಿ ಸೇವಾಜೆ ಅವರು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಪ್ರದರ್ಶನ ಮಾಡಿದರು. ಹಾಗೂ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ವಿವಿಧ ಹಣ್ಣು, ತರಕಾರಿ, ಸೊಪ್ಪು, ಹಾಗೂ ತಿನಿಸುಗಳನ್ನು ಮಾರಾಟ ಮಾಡಿ ವ್ಯಾಪಾರ ಮಾಡಿದರು. ಇದಾದ ಬಳಿಕ ಸೇವಾಜೆ ಶಾಲೆಯಲ್ಲಿ ಒಂದು ವರ್ಷಗಳ ಕಾಲ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಈಗ ಸ ಹಿ ಪ್ರಾ ಶಾಲೆ ಮೂಡ್ನೂ ರು ಮರ್ಕಂಜ ಇಲ್ಲಿ ಪದವೀಧರ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಶ್ವಿನಿ ಮುಂಡೋಡಿ ಇವರಿಗೆ ಸನ್ಮಾನ ಮಾಡಲಾಯಿತು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಶಾರದಾರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೀವನ್ ಕುಮಾರ್ ಟಿ. ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಮಮತಾ ವಂದಿಸಿದರು.