ಜಯನಗರ – ಕುದ್ಪಾಜೆ ರಸ್ತೆ ದುರಸ್ತಿ ಆಗ್ರಹಿಸಿ ಸ್ಥಳೀಯರಿಂದ ಸುಳ್ಯ ತಹಶೀಲ್ದಾರ್ ರಿಗೆ ಮನವಿ

0

ಜಯನಗರ ವಾರ್ಡಿನ ಮುಖ್ಯರಸ್ತೆ ಹಳೆಗೇಟು -ಹೊಸಗದ್ದೆಯಿಂದ ಕುದ್ಪಾಜೆಯವರೆಗೆ ಕೆಲವು ಕಡೆಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಪಡಿಸಿ ಕೊಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳಾದ ಆಟೋ ಚಾಲಕರಾದ ರಮೇಶ್ ಹಾಗೂ ಶಫೀಕ್ ರವರು ಸುಳ್ಯ ತಹಶೀಲ್ದಾರರನ್ನು ಭೇಟಿ ಮಾಡಿ ಮನವಿಯನ್ನು ನೀಡಿದ್ದಾರೆ.

ಅವರು ನೀಡಿರುವ ಮನೆಯಲ್ಲಿ ಸ್ಥಳೀಯ ಸುಮಾರು ನೂರಕ್ಕೂ ಹೆಚ್ಚು ನಿವಾಸಿಗಳ ಸಹಿ ಸಂಗ್ರಹಿಸಿ ವಾಹನ ಸಂಚಾರಕ್ಕೆ ರಸ್ತೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.
ಮನವಿ ಸ್ವೀಕರಿಸಿರುವ ತಹಶೀಲ್ದಾರರು ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.