ಭಾರತ್ ಆಗ್ರೋ ಸರ್ವಿಸ್ ಆ್ಯಂಡ್ ಸಪ್ಲೈಸ್ ಸುವರ್ಣ ಸಂಭ್ರಮ

0

ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ – ಎಂ. ಬಿ. ಸದಾಶಿವ ಅವರಿಂದ ಆಗ್ರೋ ಸಾಧನೆಯ ಅವಲೋಕನ

ಐವರು ಸಾಧಕರಿಗೆ ಆಗ್ರೋ ಗೌರವ ಸನ್ಮಾನ – ಸಾಕ್ಷ್ಯಚಿತ್ರ ಹಾಗೂ ವಿಶೇಷ ಪುರವಣಿ ಬಿಡುಗಡೆ

ಸುಳ್ಯದ ಆಗ್ರೋ ರಾಮಚಂದ್ರ ಅವರ ಮಾಲಕತ್ವದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ ಸಂಸ್ಥೆಯ ಆಗ್ರೋ ಸುವರ್ಣ ಸಂಭ್ರಮದ ಪ್ರಯುಕ್ತ ಆಗ್ರೋ ಗೌರವ ಸನ್ಮಾನ, ಸಾಕ್ಷ್ಯಚಿತ್ರ ಹಾಗೂ ವಿಶೇಷ ಪುರವಣಿ ಬಿಡುಗಡೆ ಕಾರ್ಯಕ್ರಮವು ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಮಾ.7ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ದೀಪಬೆಳಗಿಸಿ, ಉದ್ಘಾಟಿಸಿ, ಮಾತನಾಡಿ ಆಗ್ರೋ ರಾಮಚಂದ್ರ ಅವರ ಭಾರತ್ ಆಗ್ರೋ ಸಂಸ್ಥೆಯು ಈ ಭಾಗದ ಕೃಷಿಕರಿಗೆ ಪೂರಕವಾದ ಸಂಸ್ಥೆಯಾಗಿ, ಕಳೆದ ಐವತ್ತು ವರ್ಷಗಳಿಂದ ಕಾರ್ಯಾಚರಿಸಿದೆ ಎಂದು ಶುಭಹಾರೈಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.

ಲ. ಎಂ.ಬಿ. ಸದಾಶಿವ ಅವರು ಆಗ್ರೋ ಸಾಧನೆಯ ಕುರಿತು ಅವಲೋಕನ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರೀನ್ ಹೀರೋ ಖ್ಯಾತಿಯ ಡಾ. ಆರ್.ಕೆ. ನಾಯರ್, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಹಿರಿಯ ಪ್ರಗತಿಪರ ಕೃಷಿಕ ಸುಬ್ರಾಯಭಟ್ ಮಾಪಲತೋಟ, ನಿವೃತ್ತ ಪ್ರಾಂಶುಪಾಲ ಎಂ. ಗೌರಿಶಂಕರ್, ಹಿರಿಯ ಪ್ರಗತಿಪರ ಕೃಷಿಕ ಶಂಕರ್ ಪ್ರಸಾದ್ ರೈ ಸಂಪಾಜೆ ಅವರಿಗೆ ಆಗ್ರೋ ಗೌರವ ಸನ್ಮಾನ ನಡೆಸಲಾಯಿತು.
ಇದೇ ವೇಳೆ ಸುದ್ದಿ ಮೀಡಿಯಾ ಅಸೋಸಿಯೇಷನ್ ವತಿಯಿಂದ ನಿರ್ಮಾಣಗೊಂಡ ಸುವರ್ಣ ಭಾರತ್ ಸಾಕ್ಷ್ಯಚಿತ್ರವನ್ನು ರೊ. ಸುರೇಶ್ ಚಂಗಪ್ಪ ಅವರು ಬಿಡುಗಡೆಗೊಳಿಸಿದರು. ಡೀಲರ್ಸ್ ಅಸೋಸಿಯೇಷನ್ ವತಿಯಿಂದ ಹೊರತರಲಾದ ಆಗ್ರೋ ಸುವರ್ಣ ಸಂಭ್ರಮ ವಿಶೇಷ ಪುರವಣಿಯನ್ನು ಡಾ. ಕೆ.ವಿ. ಚಿದಾನಂದ ಅವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಮಾಲಕ ರೊ. ರಾಮಚಂದ್ರ ಪಿ., ಶ್ರೀಮತಿ ಮಂಜುಳ ರಾಮಚಂದ್ರ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಡಾ. ಆರ್.ಕೆ. ನಾಯರ್ ಅವರ ಅಧ್ಯಕ್ಷತೆಯಲ್ಲಿ ಆಗ್ರೋ ಕೃಷಿ ಚಿಂತನ ಕಾರ್ಯಕ್ರಮ ನಡೆಯಿತು.

ಅನಂತರಾಮ ಕೃಷ್ಣ ಪೆರುವಾಯಿ ಅವರು ಸ್ವಯಂಚಾಲಿತ ನೀರಾವರಿ ವಿಧಾನದ ಕುರಿತು , ಪ್ರವೀಣ ಕೇಶವ ಮೃರುಗ, ಕುರುಡುಪದವು ಅವರು ಕನಿಷ್ಠ ನೀರು, ಅಡಿಕೆ ಕೃಷಿ ಕುರಿತು ಹಾಗೂ ಮುರಳೀಧರ ಭಟ್ ಬಂಗಾರಡ್ಕ ಅವರು ಟ್ಯಾಂಕ್ ಬಳಕೆ, ಮಳೆಕೊಯ್ಲು ಕುರಿತು ವಿಷಯದ ಕುರಿತು ಕೃಷಿ ಚಿಂತನ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಹೀರೋ ಖ್ಯಾತಿಯ ಡಾ. ಆರ್.ಕೆ. ನಾಯರ್ ಗುಜರಾತ್ ಅವರು ಪ್ರಕೃತಿ – ಯಂತ್ರ – ಬದುಕು ಕುರಿತು ಮಾತನಾಡಿದರು. ಸಂಸ್ಥೆಯ ಮಾಲಕ ರೊ. ರಾಮಚಂದ್ರ ಪಿ. ಅವರು ಸ್ವಾಗತಿಸಿ, ರೊ. ಸನತ್ ಪಿ.ಆರ್. ವಂದಿಸಿದರು. ಮಹೇಶ್ ಪುಚ್ಚಪ್ಪಾಡಿ ಮತ್ತು ರಮೇಶ್ ದೇಲಂಪಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು.