ಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಒಂಟಿ ಸಲಗ

0

ಐನೆಕಿದು ಶಾಲಾ ಬಳಿ ಒಂಟಿ ಸಲಗವೊಂದು ಇಂದು‌ ಸಂಜೆ ರಸ್ತೆ ದಾಟಿದೆ.

ಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ಸಂಜೆ ಸುಮಾರು 6 ಗಂಟೆಯೆ ವೇಳೆಗೆ ದಾಟಿದ್ದು, ರಸ್ತೆಯಲ್ಲಿ ಸಂಚರಿಸುವವರೊಬ್ಬರು ಕಾಡಾನೆ ದಾಟುವುದನ್ನು ತಮ್ಮ ಮೊಬೈಲ್ ನಲ್ಲಿ‌ ಚಿತ್ರೀಕರಿಸಿದ್ದಾರೆ.


ಇದೀಗ ಈ ಭಾಗದ ಜನತೆ ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕಾಗಿದೆ.