ಆದರ್ಶ ಮೆರೆದ ಚಂದ್ರ ಕೋಲ್ಚಾರ್ ದಂಪತಿಗಳು

0

ವಧೂವರರಿಗೆ ಉಡುಗೊರೆಯಾಗಿ ಬಂದ ಹಣ ಶಾಲೆಗೆ ದೇಣಿಗೆ

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ , ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢ ಶಾಲೆಯ ಸ್ಥಾಪಕ ಸಂಚಾಲಕರು, ಐವರ್ನಾಡಿನಲ್ಲಿ ನೆಲೆಸಿರುವ ಚಂದ್ರ ಕೋಲ್ಚಾರ್ ಮತ್ತು ಶ್ರೀಮತಿ ಜಯಶ್ರೀ ಕೆ. ಸಿ.ಯವರ ಸುಪುತ್ರಿ ಕು.ಜಾಗೃತಿ ಕೋಲ್ಚಾರುರವರ ವಿವಾಹವು ಮೂಡಾಯಿಮಜಲು ಶ್ರೀಮತಿ ಪ್ರೇಮಾವತಿ ನಾರಾಯಣ ಗೌಡರ ಪುತ್ರ ಚೇತನ್ ಕುಮಾರ್ ರವರೊಂದಿಗೆ ಸುಳ್ಯ ಕೊಡಿಯಾಲಬೈಲ್ ನ ಗೌಡರ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಸಾವಿರಾರು ಬಂಧು ಮಿತ್ರರ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿತು ‌.

ದೇಶ ಸೇವೆಯ ಕಾರ್ಯಕ್ಕಾಗಿ ಮಂಗಳನಿಧಿ ಸಮರ್ಪಣೆಯು ಜರಗಿತು . ಡಾ. ನಂದಕುಮಾರ್ ಹಾಗೂ ತಂಡದವರು ಮದುವೆ ಸಭಾಂಗಣಕ್ಕೆ ಆಗಮಿಸಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವುದರೊಂದಿಗೆ ನವದಂಪತಿಗಳಿಗೆ ಶುಭ ಹಾರೈಸಿದರು.


ಈ ಶುಭ ಕಾರ್ಯದಲ್ಲಿ ವಧೂವರರಿಗೆ ಆಶೀರ್ವಾದ ರೂಪದಲ್ಲಿ ಉಡುಗೊರೆಯಾಗಿ ಬಂದ ರೂ.1,50,500/ ನ್ನು ಚಂದ್ರ ಕೋಲ್ಚಾರ್ ರವರು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೌಡರ ಯುವ ಸೇವಾ ಸಂಘದ ಆಡಳಿತಕೊಳ್ಳಪಟ್ಟ ಮಹಾತ್ಮ ಗಾಂಧಿ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಗೆ ದೇಣಿಗೆಯಾಗಿ ನೀಡಿದರು. ಸುಮಾರು 1.5 ಕಿ.ಮೀ ಉದ್ದದ ಕಣಿಪ್ಪಿಲ- ಬಾಂಜಿಕೋಡಿ ಪಂಚಾಯತ್ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ಅಗಲೀಕರಣಗೊಳಿಸಿ “ಬೆಳದಿಂಗಳು” ಹೆಸರಿನಲ್ಲಿ ಸುಂದರವಾದ ವೃತ್ತವನ್ನು ನಿರ್ಮಿಸಿರುತ್ತಾರೆ.


ಒಂದು ಹೊಸ ಮಾದರಿಯ ಕೊಡುಗೆಯನ್ನು ಸಮಾಜಕ್ಕೆ ನೀಡಿ ಆದರ್ಶ ಮೆರೆದರು. ಸಮಾಜದಲ್ಲಿ ಇಂತಹ ಆದರ್ಶ ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಹಾಗೂ ಸಮಾಜಮುಖಿ ಕಾರ್ಯಗಳ ನಡೆಯುವಂತಾಗಲಿ .
ತಮ್ಮ ಮಗಳ ವಿವಾಹ ಸಮಾರಂಭಕ್ಕೆ ಆಗಮಿಸಿ, ಆಶೀರ್ವದಿಸಿದ ತಮ್ಮೆಲ್ಲಾ ಕುಟುಂಬದವರಿಗೆ , ಆತ್ಮೀಯ ಬಂಧುಗಳಿಗೆ , ಹಿತೈಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.