ಕೊಡಗು ಸಂಪಾಜೆ: ಶಾಸಕ ಪೊನ್ನಣ್ಣ ಅವರಿಂದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

0

ಕಳಪೆ ಕಾಮಗಾರಿ ಕಂಡುಬಂದರೆ ಅಧಿಕಾರಿಗಳೇ ನೇರ ಹೊಣೆ : ಶಾಸಕರಿಂದ ಎಚ್ಚರಿಕೆ

ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗಳಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾ.7ರಂದು ಗುದ್ದಲಿಪೂಜೆ ನೆರವೇರಿಸಿದರು.
ಕೊಡಗು ಸಂಪಾಜೆ ಗ್ರಾಮದ ಸಂಪಾಜೆ ಅರೆಕಲ್ಲು ರಸ್ತೆ, ಕುಂಬಾಡಿ ಬಾಳೆಹಿತ್ಲು ರಸ್ತೆ, ಕೊಯನಾಡು ಬೈಲು ರಸ್ತೆ, ಗುಡ್ಡೆಗದ್ದೆ ರಸ್ತೆ, ಕುಂಟಿ ಕಾನ ಕೂಟೆಲು ರಸ್ತೆ ಸೇರಿದಂತೆ ಒಟ್ಟು ಎಂಭತ್ತು ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ರಸ್ತೆ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಡೆಸಿ, ಕಳಪೆ ಕಾಮಗಾರಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಈ ವೇಳೆ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೆಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ, ಕೆ.ಪಿ.ಸಿ.ಸಿ. ವಕ್ತಾರ ಎಂ. ಲಕ್ಷ್ಮಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, .ಮಡಿಕೇರಿ ತಾಲೂಕು ಅಕ್ರಮ – ಸಕ್ರಮ ಸಮಿತಿ ಅಧ್ಯಕ್ಷ ಉಮೇಶ್ ಪೆರುಮುಂಡ, ಕಾಂಗ್ರೆಸ್ ಮುಖಂಡರುಗಳಾದ ಸುರೇಶ್ ಪಿ.ಎಲ್., ಹನೀಫ್ ಎಸ್.ಪಿ., ತಿರುಮಲ ಸೋನ, ಶಮೀರ್ ಮೈನ, ತುಳಸಿ ಗಾಂಧಿಪ್ರಸಾದ್, ಸೂರಜ್ ಹೊಸೂರು, ಅಬೂಸಾಲಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗಣಪತಿ, ರಾಜೇಶ್ವರಿ ಕೆ.ಕೆ., ರಿತಿನ್ ಡೆಮ್ಮಲೆ, ರಾಜೇಶ್ ಕುದ್ಕುಳಿ, ಹರೀಶ್ ಪಡ್ಪು, ಜಗದೀಶ್ ಕೆದಂಬಾಡಿ, ಸಂತೋಷ್ ಕುಮಾರ್, ಪುರುಷೋತ್ತಮ ಬಾಳೆಹಿತ್ಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.