ಧೈರ್ಯದಿಂದ ದೌರ್ಜನ್ಯ ಎದುರಿಸಿ, ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಪ್ರಯತ್ನಿಸಿ : ಎಸ್.ಐ. ಸರಸ್ವತಿ

0

ಮಹಿಳೆಯರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಬೇಕು. ತಾಂತ್ರಿಕವಾಗಿ ಬೆಳೆದಿರುವ ಸಮಾಜದಲ್ಲಿ ಮೊಬೈಲ್ ಗಳ ಮೂಲಕ ಆಗಬಹುದಾದ ದುಷ್ಪರಿಣಾಮಗಳನ್ನು ತಡೆಗಟ್ಟಬೇಕಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಸುಳ್ಯ ಎಸ್.ಐ.ಸರಸ್ವತಿ ಹೇಳಿದರು.


ಸುಳ್ಯ ನಗರ ಪಂಚಾಯತ್ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಇಂದು ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಸಭೆಯ ಅಧ್ಯಕ್ಷತೆಯನ್ನು ಸ್ವಸಹಾಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುಲೋಚನಾ ವಹಿಸಿದ್ದರು.
ನೆಹರೂ ಸ್ಮಾರಕ ಕಾಲೇಜ್ ಉಪನ್ಯಾಸಕಿ ಡಾ.ಅನುರಾಧ ಕುರುಂಜಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ನ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಕಿಶೋರಿ ಶೇಟ್, ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತ್ತಡ್ಕ, ಸದಸ್ಯರಾದ ಶೀಲಾ ಕುರುಂಜಿ, ಶ್ರೀಮತಿ ಜಯಲಕ್ಷ್ಮಿ, ತಿಮ್ಮಪ್ಪ ಪಾಟಾಳಿ, ಶ್ರೀಮತಿ ರಂಜಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.