ಭಗವತ್ ಚಿಂತನೆಯ ಮೂಲಕ ಗರ್ಭಾವಸ್ಥೆಯಿಂದಲೇ ಮಗುವಿಗೆ ಸಂಸ್ಕಾರ ಕಲಿಸಬೇಕು : ಶ್ರೀಮತಿ ಪ್ರೇಮಾ ಪ್ರಭಾಕರ್

0

ತಪ್ಪು ಆಹಾರ ಪದ್ದತಿ ಮತ್ತು ತಪ್ಪು‌ಜೀವನ ಶೈಲಿಯಿಂದ‌ ಮಹಿಳೆಯರು ಹೊರ ಬರಬೇಕಾಗಿದೆ : ಡಾ.ವಿಜಯಲಕ್ಷ್ಮಿ

ವಿವೇಕ ಜಾಗೃತ ಬಳಗ‌ ಸುಳ್ಯ ಇದರ ವತಿಯಿಂದ ಸುಳ್ಯದಲ್ಲಿ ವನಿತಾ ಸಂಗಮ ಕಾರ್ಯಕ್ರಮ

ಮಹಿಳೆ ತನ್ನ ಸಂಸಾರವನ್ನು ನಡೆಸುವಂತಾಗಲು ದೇವರ ಸ್ಮರಣೆಯಲ್ಲಿ ತನ್ನನ್ನು‌ ತೊಡಗಿಸಿಕೊಳ್ಳಬೇಕು. ಭಗವತ್ ಚಿಂತನೆಯ ಮೂಲಕ ಗರ್ಭಾವಸ್ಥೆಯಿಂದಲೇ ಮಗುವಿಗೆ ಸಂಸ್ಕಾರ ಕಲಿಸಿದರೆ ಅಂತಹ ಮಗು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮಂಗಳೂರಿನ ಶ್ರೀಮತಿ ಪ್ರೇಮಾ ಪ್ರಭಾಕರ್ ಹೇಳಿದರು.
ಅವರು ಸುಳ್ಯದಲ್ಲಿ ಡಿವೈನ್ ಪಾಕ್೯ ಟ್ರಸ್ಟ್ ಸಾಲಿಗ್ರಾಮ ಇದರ ಅಂಗಸಂಸ್ಥೆಯಾದ ವಿವೇಕ‌ ಜಾಗೃತ ಬಳಗ ಸುಳ್ಯ ಇದರ ವತಿಯಿಂದ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಇಂದು ನಡೆದ ಮನೆಯನ್ನೇ ಮಂತ್ರಾಲಯವಾಗಿಸುವ ವನಿತಾ ಸಂಗಮ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.‌

ಆರೋಗ್ಯ ಮಾಹಿತಿಯನ್ನು ನೀಡಿದ ಡಾ.ವಿಜಯಲಕ್ಷ್ಮಿ ನಾಯಕ್ ರವರು ಮಾತನಾಡಿ ತಪ್ಪು ಆಹಾರ ಪದ್ದತಿ ಮತ್ತು ತಪ್ಪು‌ ಜೀವನ ಶೈಲಿಯಿಂದ‌ ಮಹಿಳೆಯರು ಹೊರ ಬರಬೇಕಾಗಿದೆ. ಪಾಶ್ಚಾತ್ಯ ಆಹಾರ ಪದ್ಧತಿಯಿಂದ ಮಹಿಳೆಯರು ದೂರ ನಿಂತು, ದಿನಂಪ್ರತಿ ಯೋಗ, ಪ್ರಾಣಾಯಾಮ, ವಾರದಲ್ಲಿ ಒಮ್ಮೆ ಉಪವಾಸ ಮಾಡುವುದರ ಮೂಲಕ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಡಿವೈನ್ ಪಾಕ್೯ನ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ವಿವೇಕ ಜಾಗೃತ ಬಳಗ ಸುಳ್ಯ ಇದರ ಅಧ್ಯಕ್ಷರಾದ ಇಂದಿರಾ ಗಣೇಶ್ ಮಾತನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಎ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುಷ್ಪ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.‌ ಉಪಾಧ್ಯಕ್ಷೆ ಮಾಲಿನಿ ಗಣೇಶ್ ವಂದಿಸಿದರು