ರವಿಕುಮಾರ್ ಅರ್ನೋಜಿ ಅಸೌಖ್ಯದಿಂದ ನಿಧನ

0

ಅಮರಮುಡ್ನೂರು ಗ್ರಾಮದ ದೊಡ್ಡತೋಟ ಅರ್ನೋಜಿ ಮನೆ ಡೀಯಪ್ಪ ಗೌಡರ ಪುತ್ರ ರವಿಕುಮಾರ್ ಅರ್ನೋಜಿಯವರು (48 ವ.) ಅಸೌಖ್ಯದಿಂದ ಮಾ.5ರಂದು ನಿಧನರಾದರು.

ರವಿಕುಮಾರ್‌ರವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರು ತಂದೆ ಡೀಯಪ್ಪ, ತಾಯಿ ಶೇಷಮ್ಮ, ಪತ್ನಿ ಸುನೀತಾ, ಸಹೋದರ ಪುರುಷೋತ್ತಮ, ಸಹೋದರಿ ತಿರುಮಲೇಶ್ವರಿ , ಪುತ್ರ ಮೋಹಿತ್ ಹಾಗೂ ಪುತ್ರಿ ಮೋಕ್ಷಿತಾ
ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ರವಿಕುಮಾರ್‌ರವರು ಕಳೆದ 20 ವರ್ಷಗಳಿಂದ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದು, ಸ್ವಂತ ಉದ್ಯೋಗ ನಡೆಸುತ್ತಿದ್ದರು.