ಕಜೆಮೂಲೆ ಕುಟುಂಬಸ್ಥರ ಭೂಮಿ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ

0

ಕಳಂಜ ಗ್ರಾಮದ ಕಜೆಮೂಲೆ ಕುಟುಂಬಸ್ಥರ ಭೂಮಿ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ಮಾ.8 ರಂದು ನಡೆಯಿತು.

ಅಂದು ಬೆಳಗ್ಗೆ ಗಣಹವನ, ನಾಗ ದೇವರ ಹಾಗೂ ಪಾಷಾಣಮೂರ್ತಿ, ಕುಪ್ಪೆಟ್ಟಿ ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ನಡೆದು ರಾತ್ರಿ ನೇಮೋತ್ಸವ ನಡೆಯಿತು. ಮಧ್ಯಾಹ್ನ ಪೂಜಾ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ನೇಮೋತ್ಸವ ಮೊದಲು ಅನ್ನ ಸಂತರ್ಪಣೆ ನಡೆಯಿತು.