ಅಂಜಲಿ ಮೊಂಟೇಸ್ಸರಿ ಸ್ಕೂಲ್‌ನಲ್ಲಿ 2024-25ನೇ ಸಾಲಿನ ದಾಖಲಾತಿ ಪ್ರಾರಂಭ

0

ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ದೊರೆಯುವ ಮೊಂಟೆಸ್ಸರಿ ಶಿಕ್ಷಣ ಈಗ ಸುಳ್ಯದಲ್ಲಿ

Summer Camp: ಎ.1 ರಿಂದ 8ರ ತನಕ ಮೂರನೇ ವರ್ಷದ ಚಿಣ್ಣರ ಕಲರವ-2024

ಸುಳ್ಯದ ಅಂಜಲಿ ಮೊಂಟೇಸ್ಸರಿ ಸ್ಕೂಲ್‌ನಲ್ಲಿ ಎಲ್.ಕೆ.ಜಿ. , ಯು.ಕೆ.ಜಿ, ಫ್ರಿ ಕೆ.ಜಿ. ಕ್ಲಾಸ್‌ಗಳಿಗೆ 2024-25ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ.

ಇಲ್ಲಿ ಮಕ್ಕಳ ಅಗತ್ಯತೆಯನ್ನು, ಮೂಲಸೌಕರ್ಯಗಳನ್ನು ಪೂರೈಸಬಲ್ಲ ಉತ್ತಮ ತರಬೇತಿ ಪಡೆದ ಶಿಕ್ಷಕ ವೃಂದ, ಎಲ್ಲಾ ವರ್ಗದವರಿಗೂ ಕೈಗೆಟಕಬಲ್ಲ ವಾರ್ಷಿಕ ಶುಲ್ಕದೊಂದಿಗೆ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ದೊರೆಯುವ ಮೊಂಟೆಸ್ಸರಿ ಶಿಕ್ಷಣ, ಮಕ್ಕಳ ಕಲಿಕಾ ಸಾಮರ್ಥ್ಯ, ಆಸಕ್ತಿ , ಅಭಿರುಚಿ , ವಯಸ್ಸು ಹಾಗೂ ಮನಸ್ಸನ್ನು ಅರ್ಥ ಮಾಡಿಕೊಂಡು ಮನದಟ್ಟುವಾಗುವ ರೀತಿಯಲ್ಲಿ ವೈಜ್ಞಾನಿಕ ಪಠ್ಯಕ್ರಮದೊಂದಿಗೆ ಚಟುವಟಿಕೆ ಆಧಾರಿತವಾಗಿ ಹೇಳಿ ಕೊಡಲಾಗುವುದು.

ಇಂಗ್ಲಿಷ್ ಭಾಷಾ ಜ್ಞಾನ ಹಾಗೂ ಸಂವಹನಾ ಕೌಶಲ್ಯವನ್ನು ಫ್ರಿ ಕೆಜಿಯಿಂದ ಹೇಳಿಕೊಡಲಾಗುವುದು. ಮಕ್ಕಳ ಮೊಂಟೇಸ್ಸರಿ ಕಲಿಕೆಗೆ ಸರಿಯಾದ ವರ್ಷ 2 ರಿಂದ 6 ಆಗಿದ್ದು, ಎಲ್.ಕೆ.ಜಿ. , ಯು.ಕೆ.ಜಿ, ಫ್ರಿ ಕೆ.ಜಿ. ಕ್ಲಾಸ್‌ಗಳಿಗೆ ಪ್ರತ್ಯೇಕ ಕೊಠಡಿಗಳನ್ನೊಳಗೊಂಡ ಸುಸಜ್ಜಿತವಾದ ಕಟ್ಟಡವನ್ನು ಒಳಗೊಂಡಿದೆ.

Summer Camp : ಇದರೊಂದಿಗೆ ಮೂರನೇ ವರ್ಷದ ಚಿಣ್ಣರ ಕಲರವ-2024 ಎ.1 ರಿಂದ 8ರ ತನಕ ನಡೆಯಲಿದೆ. 7ರಿಂದ 14ವರ್ಷದ ಮಕ್ಕಳಿಗೆ ಈ ಬೇಸಿಗೆ ಶಿಬಿರ ನಡೆಯಲಿದ್ದು, ನೊಂದಾವಣೆಗೆ ಕೊನೆಯ ದಿನಾಂಕ ಮಾ.21ಆಗಿದೆ.
ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಮೆಹಂದಿ ಡಿಸೈನ್, ಭಜನೆ, ಡ್ಯಾನ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕಲಿಸಿಕೊಡಲಾಗುವುದು.

ಹಾಗೂ 1ರಿಂದ 10ನೇ ತರಗತಿ ಮಕ್ಕಳಿಗೆ ಕೋಚಿಂಗ್ ತರಗತಿಯನ್ನು ಸಂಜೆ 4.30ರಿಂದ 6.30ವರೆಗೆ ನೀಡಲಾಗುತ್ತದೆ.
ನವೋದಯ ಕೋಚಿಂಗ್ ಕ್ಲಾಸ್, ಇಂಗ್ಲಿಷ್ ಕಲಿಯಬೇಕು ಎನ್ನುವ ಹಂಬಲವಿರುವ ಎಲ್ಲಾ ವಯೋ ಮಿತಿಯ ಆಸಕ್ತರಿಗೆ ಇಂಗ್ಲಿಷ್ ಸ್ಪೋಕನ್ ಕ್ಲಾಸ್ ನೀಡಲಾಗುತ್ತದೆ.

ಪ್ರಸ್ತುತ ಸಂಸ್ಥೆಯು ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಅಂಬೆಟಡ್ಕ ದ ಆಯುರ್ವೇದ ಕಾಲೇಜಿನ ಮುಂಭಾಗವಿರುವ ಬಿಲ್ಡಿಂಗ್ ಗೆ ಸ್ಥಳಾಂತರಗೊಳ್ಳಲಿದೆ.

ಮಾರ್ಚ್ 21ರ ಒಳಗಾಗಿ ದಾಖಲಾತಿ ಮಾಡಿದ್ದಲ್ಲಿ ವಾರ್ಷಿಕ ಶುಲ್ಕದಿಂದ 10% ಡಿಸ್ಕೌಂಟ್ ನೀಡಲಾಗುತ್ತದೆ ಎಂದು ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ. ಜಿ.
ತಿಳಿಸಿದ್ದಾರೆ. ವಿವರಗಳಿಗಾಗಿ : 9731357982, 9591762980