ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಹಾಗೂ ಪೂರ್ವಭಾವಿ ಸಭೆ

0

ಮಾ.25ರಿಂದ ಎ.10ರವರೆಗೆ ಜರುಗಲಿರುವ ವರ್ಷಾವಧಿ ಜಾತ್ರೋತ್ಸವ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಹಾಗೂ ಪೂರ್ವಭಾವಿ ಸಭೆಯು ದೇವಸ್ಥಾನದ ಸಭಾಭವನದಲ್ಲಿ ಮಾ.9ರಂದು ನಡೆಯಿತು.

ಬೆಳಿಗ್ಗೆ ಜಾತ್ರೋತ್ಸವಕ್ಕೆ ಮುಹೂರ್ತದ ಗೊನೆ ಕಡಿಯಲಾಯಿತು. ಬಳಿಕ ನಡೆದ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಜಾತ್ರೋತ್ಸವದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ದೇವಾಲಯದ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕ ರಾಜಗೋಪಾಲ ರಾಮಕಜೆ, ತಕ್ಕಮುಖ್ಯಸ್ಥರುಗಳಾದ ಭಾಸ್ಕರ ಕೋಡಿ, ಭವಾನಿಶಂಕರ ಕೋಡಿ, ಎನ್.ಸಿ. ಪುರುಷೋತ್ತಮ, ವಿಶ್ವನಾಥ ಮೂಲೆಮಜಲು, ಗಣಪತಿ ಕುಂಬಳಚೇರಿ, ಸುಜಯ ಪುತ್ಯತ್ತಾಯ, ನಾಗೇಶ್ ಕುಂದಲ್ಪಾಡಿ, ಪದ್ಮಯ್ಯ ಕುಂದಲ್ಪಾಡಿ, ಸುರೇಶ್ ಪಿ‌.ಎಲ್., ವಿಶ್ವನಾಥ ಕುಂಬಳಚೇರಿ, ಹೊನ್ನಪ್ಪ ಕೊಳಂಗಾಯ, ಆರ್.ಡಿ.ಆನಂದ, ನಂಜಪ್ಪ ನಿಡ್ಯಮಲೆ, ಗ್ರಾ.ಪಂ. ಸದಸ್ಯ ಉದಯ ಕುಂಬಳಚೇರಿ , ಜೋಯಪ್ಪ ನಿಡ್ಯಮಲೆ, ಜಯರಾಮ ಪೆರುಮುಂಡ ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆ ನೀಡಿದರು.

ಶ್ರೀ ಶಾಸ್ತಾವು ದೇವರ ಸನ್ನಿಧಿಯಲ್ಲಿ ಜಾತ್ರೋತ್ಸವವು ಮಾ.25ರಿಂದ ಎ.10ರ ವರೆಗೆ ನಡೆಯಲಿದೆ.