ಜೇಸಿಐ ಬೆಳ್ಳಾರೆ ಘಟಕದಿಂದ ಜಿ.ಬಿ ಮೀಟಿಂಗ್ ಮತ್ತು ಎಲ್.ಡಿ.ಎಂ.ಟಿ ತರಬೇತು ಕಾರ್ಯಕ್ರಮ

0

ಜೇಸಿಐ ಬೆಳ್ಳಾರೆ
ವತಿಯಿಂದ ಬೆಳ್ಳಾರೆ ಜೇಸಿ ಭವನದಲ್ಲಿ LDMT ತರಬೇತು ಕಾರ್ಯಕ್ರಮ ಮಾ.08 ರಂದು ನಡೆಯಿತು. ತರಬೇತು ಕಾರ್ಯಕ್ರಮದಲ್ಲಿ ಜೇಸಿ ಬೆಳ್ಳಾರೆ ಘಟಕದ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ , ಜೇಸಿಐ ವಲಯ 15ರ ಉಪಾಧ್ಯಕ್ಷರಾದ ಜೆಎಫ್ಎಂ ಅಭಿಷೇಕ್ ಜಿ ಎಂ, ಜೇಸಿಐ ಬೆಳ್ಳಾರೆ ಯ ನಿಕಟ ಪೂರ್ವಾಧ್ಯಕ್ಷ ರವೀಂದ್ರನಾಥ್ ರೈ ಅಜಪಿಲ, ವಲಯ ಅಧಿಕಾರಿ ಜೇಸಿ ನಿರ್ಮಲಾ ಜಯರಾಮ್ ಉಪಸ್ಥಿತರಿದ್ದರು. ಜೇಸಿ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ತರಬೇತಿಯನ್ನು ನೀಡುವ ಮೂಲಕ ವಲಯದ ಉಪಾಧ್ಯಕ್ಷರಾದ ಜೆಎಫ್ಎಂ ಅಭಿಷೇಕ್ ಜಿ ಎಮ್ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜೇಸಿ ವಾಣಿಯನ್ನು ಜೇಸಿ ರಮೇಶ್ ಉದ್ಘೋಷಿಸಿದರು. ಜೇಸಿಐ ಬೆಳ್ಳಾರೆ ಘಟಕದ ಕಾರ್ಯದರ್ಶಿ ವಾಸುದೇವ ಆಚಾರ್ಯ ಪೆರುವಾಜೆ ವಂದಿಸಿದರು.