ಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಕಾಡಾನೆ

0

ಐನೆಕಿದು ಶಾಲಾ ಬಳಿ ಮಾ.11 ರಂದು ಕಾಡಾನೆ ರಸ್ತೆ ದಾಟಿರುವೂದಾಗಿ ವರದಿಯಾಗಿದೆ.

ಇದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಇದೇ ಜಾಗದಲ್ಲಿ ಕಾಣಿಸಿಕೊಂಡಿದ್ದ ಈ ಆನೆಯು ಆದೇ ಪರಿಸರದಲ್ಲಿ ಬೀಡು ಬಿಟ್ಟಿರುವ ಸಾದ್ಯತೆಯಿದೆ. ಮುಂಜಾನೆ 7 ಗಂಟೆ ಸುಮಾರಿಗೆ ಈ ರಸ್ತೆಯ ಮೂಲಕ ಸಂಚರಿಸುವವರಿಗೆ ಆನೆ ಕಾಣಿಸಿಕೊಂಡಿದ್ದು ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.


ಈ ರಸ್ತೆಯ ಮೂಲಕ ಸಂಚರಿಸುವ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅನಿವಾರ್ಯತೆ ಎನಿಸಿದೆ .

(ವರದಿ: ಕುಶಾಲಪ್ಪ ಕಾಂತುಕುಮೇರಿ)