ಬೆಳ್ಳಾರೆ : ಆ್ಯಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

0

ಬೆಳ್ಳಾರೆಯಲ್ಲಿ ಮಹಿಳೆಯೋರ್ವರು ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ ಘಟನೆ ಮಾ.11 ರಂದು ನಡೆದಿದೆ.


ವೀಣಾ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧ್ಯಾಹ್ನ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿದ್ದು ಬಳಿಕ ತನ್ನ ಸಹೋದ್ಯೋಗಿಗೆ ಫೋನ್ ಮುಖಾಂತರ ನಡೆದ ಘಟನೆ ತಿಳಿಸಿದರೆನ್ನಲಾಗಿದೆ.

ಬಳಿಕ ಅವರ ಮನೆಯವರಿಗೆ ತಿಳಿಸಿ ರಿಕ್ಷಾದ ಮೂಲಕ ಅವರನ್ನು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.