ದೇಶದಲ್ಲಿ ಪೌರತ್ವ ಕಾಯಿದೆ ಜಾರಿಗೊಳಿಸಿದ ಕೇಂದ್ರ ಸರಕಾರ

0

ನಾಲ್ಕು ವರ್ಷಗಳ ಹಿಂದೆ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಟಿಝನ್ ಶಿಪ್ ಅಮೆಂಡ್‍ಮೆಂಟ್ ಆ್ಯಕ್ಟ್- CAA)ಯನ್ನು ಮರು ಜಾರಿಗೊಳಿಸಿ ಕೇಂದ್ರ ಸರಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ನೆರೆ ರಾಷ್ಟ್ರಗಳ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವುದು ಈ ಕಾಯಿದೆಯ ಉದ್ದೇಶ. ಈ ಮೊದಲು 2019ರ ಡಿಸೆಂಬರ್‌ನಲ್ಲಿ ಸಂಸತ್ ನಲ್ಲಿ ಅಂಗೀಕಾರ ಪಡೆದು ಪೌರತ್ವ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ದೇಶಾದ್ಯಂತ ಭಾರಿ ವಿರೋಧದ ಕಿಡಿ ಹೊತ್ತಿದ್ದರಿಂದ ತಾತ್ಕಾಲಿಕವಾಗಿ ಈ ಕಾಯಿದೆಯನ್ನು ಹಿಂದಕ್ಕೆ ಪಡೆಯಲಾಯಿತು.

ಆ ಬಳಿಕ ಕೆಲವು ತಿದ್ದುಪಡಿಗಳೊಂದಿಗೆ ಈ ಕಾಯಿದೆಯನ್ನು ಮರು ಜಾರಿಗೆ ತರುವ ಸಂಕಲ್ಪವನ್ನು ಗೃಹ ಸಚಿವ ಅಮಿತ್ ಶಾ ಮಾಡಿದ್ದರು. ಇದೀಗ 2024ರ ಲೋಕಸಭೆ ಚುನಾವಣೆ ಘೋಷಣೆಗೂ ಕೆಲವೇ ದಿನಗಳ ಮೊದಲು ಪೌರತ್ವ ತಿದ್ದುಪಡಿ ಕಾಯಿದೆ ಅಧೀಸೂಚನೆ ಹೊರಡಿಸುವ ಮೂಲಕ ದೇಶದಲ್ಲಿ ಮತ್ತೆ ಸಂಚಲನ ಉಂಟಾಗಿದೆ.