ಮಾ.12-13: ಸೋಣಂಗೇರಿ ಬೇಲ್ಯದಲ್ಲಿ ನೇಮೋತ್ಸವ

0

ಸೋಣಂಗೇರಿ ಬೇಲ್ಯದ ನರಸಿಂಗ ಪರವರ ಮನೆಯಲ್ಲಿ ಶ್ರೀ ಪಾಷಾಣಮೂರ್ತಿ, ಕೊರತ್ತಿ, ಮಯ್ಯೊಂತಿ, ಧರ್ಮದೈವ ಕುಪ್ಪೆ ಪಂಜುರ್ಲಿ ದೈವದ ನೇಮೋತ್ಸವ ಮಾ.12 ಮತ್ತು 13 ರಂದು ನಡೆಯಲಿದೆ.
ಮಾ‌.12 ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಗಂಟೆ 8.00ರಿಂದ ಅನ್ನಸಂತರ್ಪಣೆ. ರಾತ್ರಿ ಗಂಟೆ 8.30ರಿಂದ ಶ್ರೀ ಪಾಷಾಣಮೂರ್ತಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ. ರಾತ್ರಿ ಗಂಟೆ 10.00ಕ್ಕೆ ಶ್ರೀ ಕೊರತ್ತಿ ದೈವದ ನೇಮ, ರಾತ್ರಿ ಗಂಟೆ 1.00ರಿಂದ ಶ್ರೀ ಮಯ್ಯೋಂತಿ ದೈವದ ನೇಮ ನಡೆಯಲಿದೆ. ಮಾ. 13ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಧರ್ಮದೈವ (ಕುಪ್ಪೆ ಪಂಜುರ್ಲಿ) ನೇಮೋತ್ಸವ, ಪ್ರಸಾದ ವಿತರಣೆ. ಮಧ್ಯಾಹ್ನ
ಅನ್ನಸಂತರ್ಪಣೆ ನಡೆಯಲಿದೆ.
ನೇಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ನರಸಿಂಗ ಪರವ ಮತ್ತು ಮಕ್ಕಳು ವಿನಂತಿಸಿದ್ದಾರೆ.