ಸಂಪಾಜೆ: ಅರೆಕಲ್ಲು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ

0

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯು ಮಾ.10ರಿಂದ ಪ್ರಾರಂಭಗೊಂಡಿದ್ದು, ಮಾ.17ರವರೆಗೆ ಜರುಗಲಿದೆ.

ಮಾ.10 ಕ್ಕೆ ಭಂಡಾರ ತರಲಾಗಿದ್ದು, ಮಾ.11ರಂದು ಭಂಡಾರ ಜಳಕ, ಮಾ.12ರಿಂದ 14ರವರೆಗೆ ಬೆಳಗಿನ ಜಾವ ಜಾತ್ರೆ ನಡೆಯಿತು.

ಮಾ.14ರಂದು ಬೆಳಿಗ್ಗೆ ದೋಸೆ ಹೊಯ್ಯುವುದು, ರಾತ್ರಿ ದೊಡ್ಡ ಜಾತ್ರೆ, ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.