ಗ್ರಾ.ಪಂ ನೌಕರ ಮುಷ್ಕರ 15 ದಿನಕ್ಕೆ ಕಾಲಿಟ್ಟಿರುವುದಾಗಿ ವರದಿಯಾಗಿದೆ.









ಸುಬ್ರಹ್ಮಣ್ಯ ಗ್ರಾ.ಪಂ ನಲ್ಲಿ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಿರುವುದು ಕಂಡುಬಂದಿದೆ.
ಹಲವು ಬೇಡಿಕೆಗಳನ್ನು ಇರಿಸಿ ಗ್ರಾ.ಪಂ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ ನೌಕರರೇನೋ ಮೌನವಾಗಿ ಪ್ರತಿಭಟಿಸುತಿದ್ದಾರೆ. ಆದರೆ ಯಾರು ಪ್ರತಿಕ್ರಿಯೆ ಮಾಡಬೇಕಿತ್ತೋ ಅವರು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಲು ಆರಂಭಿಸಿದ್ದಾರೆ.









