ಕೊಲ್ಲಮೊಗ್ರ ಶಾಲೆಯಲ್ಲಿ ಪ್ರೇರಣಾ – ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರು ಇನ್ಫೋಟೆಕ್ ಇದರ ಜಂಟಿ ಆಶ್ರಯದಲ್ಲಿ
ಮಾ.12 ರಂದು ಕೊಲ್ಲಮೊಗ್ರು ಕೆವಿಜಿ ಅನುದಾನಿತ ಪ್ರೌಡ ಶಾಲೆಯಲ್ಲಿ “ಪ್ರೇರಣಾ” ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷತೆಯನ್ನು ಜೇಸಿಏ ಪಂಜ ಪಂಚಶ್ರೀ ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ ವಹಿಸಿದ್ದರು.

ವಲಯ ತರಬೇತುದಾರ ಜೇಸಿ ಸವಿತಾರ ಮುಡೂರು , ಶಾಲಾ ಶಿಕ್ಷಕ ವೆಂಕಟ್ರಮಣ ಕೆ ,ಘಟಕದ ಕಾರ್ಯದರ್ಶಿ ಜೇಸಿ ಜೀವನ್ ಶೆಟ್ಟಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೇಸಿ ವಿಜೇಶ್ ಹಿರಿಯಡ್ಕ ತರಬೇತುದಾರರ ಪರಿಚಯವನ್ನು ಮಾಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ವಲಯ ತರಬೇತುದಾರರಾದ ಜೇಸಿ ಸವಿತಾರ ಮುಡೂರು ತರಬೇತಿ ನಡೆಸಿಕೊಟ್ಟರು.