ಸಂಪಾಜೆ: ಗ್ರಾಮೀಣ ಕಬಡ್ಡಿಪಟು ನಂದಕುಮಾರ್ ಪಿ.ಆರ್. ಅಸೌಖ್ಯದಿಂದ ನಿಧನ

0

ದ.ಕ. ಸಂಪಾಜೆ ಗ್ರಾಮದ ಬಾಚಿಗದ್ದೆ ಪೇರಾಲು ನಿವಾಸಿ, ಗ್ರಾಮೀಣ ಕಬಡ್ಡಿಪಟು ನಂದಕುಮಾರ್ ಪಿ.ಆರ್. ಅವರು ಅಸೌಖ್ಯದಿಂದಾಗಿ ಮಾ.22ರಂದು ಬೆಳಿಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕಬಡ್ಡಿ ಪಟುವಾಗಿ ಹೆಸರುಗಳಿಸಿದ್ದ ನಂದಕುಮಾರ್ ಅವರನ್ನು ಅಸೌಖ್ಯದಿಂದಾಗಿ ಕಳೆದ ಒಂದು ವಾರದ ಹಿಂದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.22ರಂದು ಬೆಳಿಗ್ಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ ಶ್ವೇತ, ಇಬ್ಬರು ಮಕ್ಕಳು, ಇಬ್ಬರು ಸಹೋದರರು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.