ಗುಡ್ಡೆ – ಬಟ್ಟೆಕಜೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಹರಿಸೇವೆ ಮತ್ತು ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿ

0

ದೇವಚಳ್ಳ ಗ್ರಾಮದ ಗುಡ್ಡೆ – ಬಟ್ಟೆಕಜೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ಶ್ರೀ ಧರ್ಮದೈವ ಮತ್ತು ಉಪದೈವಗಳ ನೇಮ ನಡಾವಳಿಯು ಮಾ.22 ಮತ್ತು 23 ರಂದು ನಡೆಯಿತು.

ಮಾ.22 ರಂದು ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಗಣಪತಿ ಹವನ,ನಾಗತಂಬಿಲ,ಮಹಾಪೂಜೆ ನಡೆದು ನಂತರ ಹರಿಸೇವೆ ನಡೆಯಿತು.
ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.


ಕೆಂಚಿರಾಯ ಪೂಜೆ, ದೈವಗಳ ಭಂಡಾರ ತೆಗೆದು ನಂತರ ಗುರುಕಾರ್ನೂರು,ದೇವತೆ.ಕಲ್ಲುರ್ಟಿ,ಅಂಗಾರ ಬಾಕುಡ,ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಪುರುಷರಾಯ ದೈವದ ನೇಮ ನಡೆಯಿತು. ಮಾ.23 ರಂದು
ಬೆಳಿಗ್ಗೆ ದೈವದ ಭಂಡಾರ ತೆಗೆದು ಶ್ರೀ ಧರ್ಮ ದೈವ,ರುದ್ರಚಾಮುಂಡಿ, ಶ್ರೀ ನಾಗಚಾಮುಂಡಿ ನೇಮೋತ್ಸವ ನಡೆಯಿತು.
ಬಳಿಕ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಮನಿಪಂದಿನ ಪಂಜುರ್ಲಿ,ಪೊಟ್ಟ ದೈವ, ಅಜ್ಜಿ – ಕೂಜಿ,ಗುಳಿಗ ದೈವದ ನೇಮ ನಡೆಯಿತು.
ಈ ಸಂದರ್ಭದಲ್ಲಿ
ಗುಡ್ಡೆ ಕುಟುಂಬದ ಸಮಸ್ತರು, ಊರ, ಪರ ಊರ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.