ಪಂಜ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಮನೆ-ಮನೆ ವ್ಯಾಪಾರ , ವ್ಯವಹಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ

0

ಗ್ರಾಮ ಪಂಚಾಯತ್ ನ ಅನುಮತಿ ಇಲ್ಲದೆ ಅಪರಿಚಿತರು ಮನೆ ಮನೆ, ವ್ಯಾಪಾರ ಇತರ ವ್ಯವಹಾರ ಮಾಡುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗ ಮತ್ತು ಊರವರು ಗ್ರಾಮ ಪಂಚಾಯತ್ ಗೆ ಮಾ.25 ರಂದು ಮನವಿ ಸಲ್ಲಿಸಿದ್ದಾರೆ.

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪರಿಚಿತರ ಹಾವಳಿ ಅಧಿಕವಾಗಿದ್ದು. ವ್ಯಾಪಾರ ಜ್ಯೋತಿಷ್ಯ ಅಂತ ಹಲವಾರು ನೇಪ ಇಟ್ಟುಕೊಂಡು ಬರುತ್ತಿದ್ದು ,ಮನೆಯ ಸುತ್ತ – ಮುತ್ತ ಜಾಲಾಡಿ ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಹೋಗುವುದಲ್ಲದೆ, ಕೆಲವು ಮನೆಗಳಲ್ಲಿ ಹಗಲಿನ ಸಮಯದಲ್ಲಿ ಹೆಂಗಸರು ಮಾತ್ರ ಇರುವುದರಿಂದ, ಮುಂದೆ ಅಹಿತಕರ ಘಟನೆ ನಡೆಯುವುದಕ್ಕೆ ಮೊದಲು ತಾವುಗಳು ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.

ಅದಲ್ಲದೆ ಇತ್ತೀಚ್ಚಿನ ದಿನಗಳಲ್ಲಿ ಸುತ್ತ ಮುತ್ತಲಿನ ಊರುಗಳಲ್ಲಿ ಚಿನ್ನ ಕಳ್ಳತನ, ಅಡಿಕೆ ಕಳ್ಳತನ ನಡೆದಿರುವುದು ತಮಗೆ ತಿಳಿದ ವಿಷಯ. ಆದ ಕಾರಣ ಮುಂದಿನ ದಿನಗಳಲ್ಲಿ ಜನರು ಶಾಂತಿ ನೆಮ್ಮದಿಯಿಂದ ನಿರ್ಭಯವಾಗಿ ಇರುವ ದೃಷ್ಟಿಯಿಂದ ತಾವುಗಳು ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು . ಈ ಕುರಿತು ಪ್ರತಿ ಒಳ ರಸ್ತೆಗಳಲ್ಲಿ ಪಂಚಾಯತ್ ವತಿಯಿಂದ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತಿದ್ದೇವೆ.ಎಂದು ಮನವಿಯಲ್ಲಿ ತಿಳಿಸಿದ್ದಾರೆ.