ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದಿನಿಂದ ಆರಂಭ

0

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದಿನಿಂದ ಆರಂಭ ಗೊಂಡು ಎಪ್ರಿಲ್ 6 ತನಕ ನಡೆಯಲಿದೆ.ಸುಳ್ಯ ತಾಲ್ಲೂಕಿನಲ್ಲಿ ಸುಳ್ಯ ನಗರದ 3 ಪರೀಕ್ಷಾ ಕೆಂದ್ರ ಸೇರಿದಂತೆ ಒಟ್ಟು 6 ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯನ್ನು ಬರೆದರು.

ಸುಳ್ಯದ ಜೂನಿಯರ್ ಕಾಲೇಜ್, ಕೆ.ಪಿ.ಎಸ್ ಗಾಂಧಿನಗರ,ಸೈಂಟ್ ಜೋಸೆಫ್ ಬೀರಮಂಗಿಲ, ಕೆ.ಪಿ ಎಸ್ ಬೆಳ್ಳಾರೆ, ಎನ್ ಎಂ ಪಿ ಆರಂತೋಡು, ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ, ಎಲ್ಲಾ ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ ನಿಂದಲೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಪರೀಕ್ಷೆಯ ಮೊದಲ ದಿನವಾದ ಇಂದು ಮಾತೃಭಾಷೆ ಕನ್ನಡ ವಿಭಾಗದ ಪರೀಕ್ಷೆ ನಡೆಯಿತು.


ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಇಲಾಖೆಯ ರಕ್ಷಣೆ, ಆರೋಗ್ಯ ಇಲಾಖೆಯಿಂದ ಸಿಬ್ಬಂದಿಗಳ ವ್ಯವಸ್ಥೆ, ಸಿ ಸಿ ಕ್ಯಾಮೆರಾ ಕಣ್ಗಾವಲು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಈ ಎಲ್ಲಾ ಪೂರಕ ವ್ಯವಸ್ಥೆಗಳು ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂದಿತು.

ಇಂದಿನ ಪರೀಕ್ಷೆಯ ಬಗ್ಗೆ ಸುದ್ದಿ ಮಾಧ್ಯಮದೊಂದಿಗೆ ಪ್ರಥಮ ದಿನದ ಅನುಭವವನ್ನು ಹಂಚಿಕೊಂಡ ವಿದ್ಯಾರ್ಥಿಗಳು ಸಂತಸವನ್ನು ವ್ಯಕ್ತಪಡಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಬೇರೆ ಬೇರೆ ಶಾಲೆಗಳಿಂದ ಬಂದಿರುವಂತಹ ವಿದ್ಯಾರ್ಥಿಗಳು ಶಿಸ್ತು ಬದ್ಧರಾಗಿ ಕಂಡುಬರುತ್ತಿದ್ದರು.