ಎ.1-2: ಕುಂಚಡ್ಕ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.1 ಮತ್ತು 2 ರಂದು ಒತ್ತೆಕೋಲ ಸಮಿತಿಯ ಆಶ್ರಯದಲ್ಲಿ ನಡೆಯಲಿರುವುದು.

ಎ.1 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಶುದ್ಧಿ ಕಲಶವಾಗಲಿದೆ. ಬಳಿಕ ಭಾರತೀಯ ಸಮಾಜ ಬಾಂಧವರ ನೇತೃತ್ವದಲ್ಲಿ ಮೇಲೇರಿಗೆ ಅಗ್ನಿಕುಂಡ ಜೋಡಣೆಯ ಕಾರ್ಯವು ನಡೆಯಲಿದೆ.

ರಾತ್ರಿ ಕುಂಚಡ್ಕ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದು ನಡೆದು ನಂತರ ಭಂಡಾರ ತೆಗೆದು ಒತ್ತೆಕೋಲದ ಮಜಲಿಗೆ ದೈವದ ಪಾತ್ರಿಗಳ ನೇತೃತ್ವದಲ್ಲಿ ಭಂಡಾರ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶವಾಗಲಿರುವುದು.

ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಪ್ರಸಾದ ವಿತರಣೆಯಾಗಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಲಿರುವುದು. ಮರುದಿನ ಪ್ರಾತ:ಕಾಲ 6.00 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶವಾಗಲಿದೆ. ಆಗಮಿಸಿದಭಕ್ತಾದಿಗಳಿಂದಹರಕೆಸಮರ್ಪಣೆಯಾಗಿ ಪ್ರಸಾದವಿತರಣೆಯಾಗಲಿರುವುದು. ಬಳಿಕ ಮಾರಿಕಳ ಪ್ರವೇಶವಾಗಿ ಒತ್ತೆಕೋಲವು ಸಮಾಪನವಾಗಲಿದೆ.

ರಾತ್ರಿ ವಿಶೇಷವಾಗಿ ಒತ್ತೆಕೋಲ ಸಮಿತಿ ಹಾಗೂ ಬಾರ್ಪಣೆ ವಿಕ್ರಮ ಯುವಕ ಮಂಡಲದ ಸಹಯೋಗದಲ್ಲಿ ಪುರುಷರ 550 ಕೆ.ಜಿ ವಿಭಾಗದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯು ಒತ್ತೆಕೋಲ ಮಜಲಿನಲ್ಲಿ ನಡೆಯಲಿರುವುದಾಗಿ ಒತ್ತೆಕೋಲ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಚಡ್ಕ ರವರು ತಿಳಿಸಿರುತ್ತಾರೆ.