ಪಂಜ:ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸನ್ಮಾನ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ ಇದರ ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸನ್ಮಾನ ಕಾರ್ಯಕ್ರಮ ಮಾ 23 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ ವಹಿಸಿದ್ದರು. ಪಂಜ ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ ರವರು ಪಂಜ ಗ್ರಾಮ ಪಂಚಾಯತ್ ನ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ಮೀನಾಕ್ಷಿ ರವರನ್ನು ಸನ್ಮಾನಿಸಿದರು.


ಮುಖ್ಯ ಅತಿಥಿಗಳಾಗಿ ಜೇಸಿಐ 15ರ ವಲಯ ಉಪಾಧ್ಯಕ್ಷರಾದ ಜೆ ಎಫ್ ಯಂ ಅಭಿಷೇಕ್ ಭಾಗವಹಿಸಿದ್ದರು, ವೇದಿಕೆಯಲ್ಲಿ ಘಟಕದ ನಿಟಕ ಪೂರ್ವಾಧ್ಯಕ್ಷ ಜೇಸಿ ಲೋಕೇಶ್ ಅಕ್ರಿಕಟ್ಟೆ , ಕಾರ್ಯದರ್ಶಿ ಜೇಸಿ ಜೀವನ್ ಶೆಟ್ಟಿಗದ್ದೆ ,ಕಾರ್ಯಕ್ರಮ ನಿರ್ದೇಶಕ ಜೇಸಿ ಕಾರ್ತಿಕ್ ಐ ವಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಾಚಣ್ಣ ಕೆರೆಮೂಲೆ ವೇದಿಕೆಗೆ ಆಹ್ವಾನಿಸಿದರು, ಜೇಸಿ ಕಾರ್ತಿಕ್ ಕಣ್ಕಲ್ ಜೇಸಿ ವಾಣಿ ನುಡಿದರು, ಜೇಸಿ ಗಗನ್ ಕಿನ್ನಿಕುಮ್ರಿ, ಜೇಸಿ ಮದನ್ ಕೊಲ್ಯ, ಜೇಸಿ ಶ್ರೇಯಸ್ ತುಪ್ಪದಮನೆ ಸನ್ಮಾನಿತರ ಮತ್ತು ಅತಿಥಿಗಳ ಪರಿಚಯ ಮಾಡಿದರು, ಘಟಕದ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವಂದಿಸಿದರು.