ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್.ಐ.ವಿ ಮತ್ತು ಯುವಜನತೆ ಕುರಿತು ಉಪನ್ಯಾಸ ಕಾರ್ಯಕ್ರಮ

0

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ಇದರ ವತಿಯಿಂದ ಹೆಚ್ ಐ ವಿ ಮತ್ತು ಯುವಜನತೆ ಕುರಿತು ಉಪನ್ಯಾಸ ಕಾರ್‍ಯಕ್ರಮವು ಮಾ-೨೫ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಉಪನ್ಯಾಸ ಕಾರ್‍ಯಕ್ರಮವನ್ನು ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿಯ ಐಸಿಟಿಸಿ ಸಮಾಲೋಚಕರಾದ ಶ್ರೀ ಬಾಲಕೃಷ್ಣ ಕೆ ಇವರು ನಡೆಸಿಕೊಟ್ಟರು, ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ ಜಯಶ್ರೀ, ಕೆ, ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಗಳಾದ ರಾಮಕೃಷ್ಣ ಕೆ.ಎಸ್, ಡಾ. ಲತಾ ಕೆ ಎನ್, ಘಟಕ ನಾಯಕರುಗಳಾದ ಸಾಕೇತ್ ಕೆ ಕೆ, ಸ್ಪೂರ್ತಿ ರೈ ಬಿ, ಪೃಥ್ವಿರಾಜ್ ಟಿ, ತೃಪ್ತಿ ಕೆ ಎಂ, ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್‍ಯಕ್ರಮ ಆರಂಭಗೊಂಡಿತು. ವೀಣಾ ಎಸ್ ದ್ವಿತೀಯ ಬಿ.ಕಾಂ ಸ್ವಾಗತಿಸಿ, ಹಿತೇಶ್ ಕೆ ಡಿ ಪ್ರಥಮ ಬಿ.ಎ ವಂದಿಸಿದರು. ಭರತ್ ಕುಮಾರ್ ದ್ವಿತಿಯ ಬಿ.ಕಾಂ ಅತಿಥಿಗಳನ್ನು ಪರಿಚಯಯಿಸಿದರು. ಸ್ವಾತಿ ಪ್ರಥಮ ಬಿ.ಕಾಂ ಕಾರ್‍ಯಕ್ರಮ ನಿರೂಪಿಸಿದರು.