ಕೇರಳದ ಮರ್ಕಝ್ ನಾಲೆಜ್ ಸಿಟಿ ಗ್ರಾಂಡ್ ಮಸ್ಜಿದ್ ಇಫ್ತಾರ್ ಸಂಗಮದಲ್ಲಿ ಸುಳ್ಯದ ಮುಖಂಡರು ಭಾಗಿ

0

ಕೇರಳದ ಪ್ರಸಿದ್ಧ ಮರ್ಕಝ್ ನಾಲೆಜ್ ಸಿಟಿ ಗ್ರಾಂಡ್ ಮಸ್ಜಿದ್ ನಲ್ಲಿ ಬೃಹತ್ ಇಫ್ತಾರ್ ಸಂಗಮದಲ್ಲಿ ಸುಳ್ಯದಿಂದ ಮುಸ್ಲಿಂ ಮುಖಂಡರು ಭಾಗವಹಿಸಿದ್ದಾರೆ.

ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮರ್ಕಝ್ ನಾಲೆಜ್ ಸಿಟಿಯಲ್ಲಿರುವ ಐತಿಹಾಸಿಕ ಗ್ರ್ಯಾಂಡ್ ಮಸ್ಜಿದ್ ಮಸ್ಜಿದುಲ್ ಫುತ್ಹ್ ನಲ್ಲಿ ಪವಿತ್ರ ರಂಜಾನ್ ತಿಂಗಳ ಬದರ್ ಸ್ಮರಣೆ ಯ 17 ರ ರಾತ್ರಿ ನಡೆದ ವಿಶೇಷ ಪ್ರಾರ್ಥನಾ ಸಂಗಮ ಮತ್ತು ಬೃಹತ್ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.


ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ, ಹಕೀಮ್ ಅಝ್ಹರಿ, ಪ್ರಖ್ಯಾತ ಇಸ್ಲಾಮಿಕ್ ಸ್ಕಾಲರ್ಸ್ ಗಳಾದ ಕಡಲುಂಡಿ ತಂಙಳ್, ಮೊದಲಾವರು ಭಾಗವಹಿಸಿದ್ದರು.
35 ಸಾವಿರಕ್ಕೂ ಮಿಕ್ಕಿ ಭಾಗವಹಿಸಿದ್ದ ಈ ಸಂಗಮ ದಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮುಸ್ತಫ ಜನತಾ ಹಲವು ಪ್ರತಿನಿಧಿಗಳು, ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಸರ್ಕಲ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ,ಉದ್ಯಮಿ ಗಳಾದ ಅಬ್ದುಲ್ ಲತೀಫ್ ಕಾಂಟ್ರಾಕ್ಟರ್, ಕೆ. ಬಿ. ಇಬ್ರಾಹಿಂ ಮೊದಲಾವರು ಭಾಗವಹಿಸಿದ್ದರು.